Homeಕರ್ನಾಟಕಸಂಪ್‌ನಲ್ಲಿ ಮುಳುಗಿದ್ದ ಮಗು ರಕ್ಷಿಸಿದ ಪಿಎಸ್‌ಐ; ಅಧಿಕಾರಿಗೆ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ

ಸಂಪ್‌ನಲ್ಲಿ ಮುಳುಗಿದ್ದ ಮಗು ರಕ್ಷಿಸಿದ ಪಿಎಸ್‌ಐ; ಅಧಿಕಾರಿಗೆ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ

ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಸಂಪ್‌ನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ರಕ್ಷಿಸುವಲ್ಲಿ ಪಿಎಸ್ಐಯೊಬ್ಬರು ಸಫಲರಾಗಿದ್ದಾರೆ.

ಬೆಂಗಳೂರು ನಗರದ ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ ಎ ಆರ್ ಎಂಬುವರು ಮಗುವಿನ ಜೀವ ಉಳಿಸಿದ್ದು, ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಾಗರಾಜ ಅವರ ಈ ಸಾಹಸವನ್ನು ಶ್ಲಾಘಿಸಿದ್ದಾರೆ.

ಮಗುವಿನ ರಕ್ಷಣೆ ಮಾಡಿದ ಪಿಎಸ್ಐ ನಾಗರಾಜ ಅವರು ಮಾಧ್ಯಮಗಳ ಜೊತೆ ಮಾತನಾಡಿ, “ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಕರ್ತವ್ಯಕ್ಕೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದೆ. ಮನೆಯ ಆವರಣದಲ್ಲಿ ಮಹಿಳೆಯರು ‘ಮಗು ಕಾಪಾಡಿ..’ ಕೂಗುತ್ತಿದ್ದರು. ನಾನೇನೋ ಹಾವು ಕಡಿದಿರಬಹುದು ಎಂದುಕೊಂಡು ಕೂಡಲೇ ಅಲ್ಲಿಗೆ ಹೋದೆ. ಮಗು ನೀರಿನಲ್ಲಿ ಬಿದ್ದಿರುವುದು ಗೊತ್ತಾಯಿತು” ಎಂದು ಹೇಳಿದ್ದಾರೆ.

ಮುಂದುವರಿದು, “ಮಗು ಬಿದ್ದ ಸಂಪ್‌ 10 ಅಡಿ ಆಳ ಇತ್ತು. ಅದರಲ್ಲಿ ಐದು ಅಡಿ ನೀರು ಇತ್ತು. ಮಗು ಬಿದ್ದು 2-3 ನಿಮಿಷ ಆಗಿರಬಹುದು. ಹಿಂದೆ ಮುಂದೆ ಯೋಚಿಸದೇ ಸಂಪ್‌ನೊಳಗೆ ಇಳಿದೆ. ನೋಡಿದ್ರೆ ಮಗು ಮೂಲೆಯಲ್ಲಿ ಇತ್ತು. ಮಗುವನ್ನು ಮೇಲೆ ಎತ್ತಿಕೊಟ್ಟೆ. ಅಷ್ಟೊತ್ತಿಗಾಗಲೇ ಮಗು ನೀರು ಕುಡಿದು ಚೂರು ಹೊಟ್ಟೆ ಉಬ್ಬಿದಂತೆ ಕಂಡಿತು. ಮಗುವಿನ ಹೊಟ್ಟೆ ಒತ್ತಿದರೆ ಪ್ರಾಣಕ್ಕೆ ತೊಂದರೆ ಆಗಬಹುದು ಎಂದು ಅರಿತು ಮೀನಿನತರ ಮಲಗಿಸಿ ಸ್ವಲ್ಪ ಸ್ವಲ್ಪ ಬೆನ್ನು ಒತ್ತಿ ನೀರು ತೆಗೆದೆ. ಅರ್ದ ಲೀಟರ್‌ ನೀರು ಹೊರಗೆ ಬಂತು. ಕೂಡಲೇ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು. ಆಸ್ಪತ್ರೆಯಲ್ಲಿ ಮಗುವಿನ ಅಳು ಕೇಳಿ ನಿರಾಳನಾದೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದು, ಬುಧವಾರ ಸಂಜೆಯೇ ಮಗುವನ್ನು ಪಾಲಕರು ಮನೆಗೆ ಕರೆದೊಯ್ದಿದ್ದಾರೆ.

Rescue of the child who was in the sump, Bangalore City, Visvesvaraya Layout, Badarahalli, Batarayanapura Traffic Police Station, PSI Nagaraja AR,ಸಂಪ್‌ನಲ್ಲಿ ಬಿದ್ದಿದ್ದ ಮಗು ರಕ್ಷಣೆ, ಬೆಂಗಳೂರು ನಗರ, ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‌, ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ, ಪಿಎಸ್ಐ ನಾಗರಾಜ ಎ ಆರ್,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments