Homeಕರ್ನಾಟಕಪಾಕಿಸ್ತಾನದ ಜಪ ಮಾಡದೆ ಚುನಾವಣೆ ಎದುರಿಸಿದ ಇತಿಹಾಸ ಬಿಜೆಪಿಗಿಲ್ಲ: ಬಿ ಕೆ ಹರಿಪ್ರಸಾದ್‌

ಪಾಕಿಸ್ತಾನದ ಜಪ ಮಾಡದೆ ಚುನಾವಣೆ ಎದುರಿಸಿದ ಇತಿಹಾಸ ಬಿಜೆಪಿಗಿಲ್ಲ: ಬಿ ಕೆ ಹರಿಪ್ರಸಾದ್‌

ಬಿಜೆಪಿ ಪಕ್ಕಕ್ಕೂ, ಪಾಕಿಸ್ತಾನದ ನೆಂಟಸ್ತನಕ್ಕೂ ಹಲವು ದಶಕಗಳ ಇತಿಹಾಸವಿದೆ. ಪಾಕಿಸ್ತಾನದ ಜಪ ಮಾಡದೆ ಬಿಜೆಪಿ ಚುನಾವಣೆ ಎದುರಿಸಿದ ಇತಿಹಾಸವೇ ಇಲ್ಲ. ಪಾಕಿಸ್ತಾನದ ಮೇಲೆ ಬಿಜೆಪಿಗೆ ನಿಜಕ್ಕೂ ರೋಷ, ವೇಷ ಇದ್ದರೆ “ಶತೃರಾಷ್ಟ್ರ” ಎಂದು ಘೋಷಿಸಲಿ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಸವಾಲು ಹಾಕಿದ್ದಾರೆ.

ಈ ಕುರಿತು ಪೋಸ್ಟ್‌ ಮಾಡಿರುವ ಅವರು, “ಒಕ್ಕೂಟ ಭಾರತವನ್ನು ಇಬ್ಭಾಗ ಮಾಡಿದ ಮೊಹಮ್ಮದ್ ಅಲಿ ಜಿನ್ನಾಗೆ “ಜಾತ್ಯಾತೀತ ನಾಯಕ”ಎಂದು ಬಿರುದು ನೀಡಿ, ಸಮಾಧಿ ಎದುರು ಕಣ್ಣೀರು ಸುರಿಸಿದ ಲಾಲ್ ಕೃಷ್ಣ ಅಡ್ವಾನಿ ಯಾವ ಪಕ್ಷದವರು? ಭಯೋತ್ಪಾದನೆಗೆ ತಲೆ ಬಾಗುವುದಿಲ್ಲ ಎಂದು ಚುನಾವಣೆಯ ಭಾಷಣ ಬೀಗಿದ್ದ ನರೇಂದ್ರ ಮೋದಿಯವರು, ಪಾಕಿಸ್ತಾನದ ಪ್ರಧಾನಿಯ ಮೊಮ್ಮಗಳ ಮದುವೆಗೆ ಆಹ್ವಾನವೇ ಇಲ್ಲದೆ, ರಹಸ್ಯವಾಗಿ ಬಿರಿಯಾನಿ ತಿಂದು ಬಂದಿದ್ದು ನೆಂಟಸ್ತನ ಅಲ್ಲವೇ” ಎಂದು ಪ್ರಶ್ನಿಸಿದ್ದಾರೆ.

“ಪಾಕಿಸ್ತಾನವನ್ನು ‘ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರವೆಂದು ಘೋಷಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮಂಡಿಸಿದ್ದ ಖಾಸಗಿ ಮಸೂದೆಯನ್ನು ವಾಪಾಸ್ ಪಡೆದಿದ್ದು ಯಾಕೆ? 56 ಇಂಚಿನ ಎದೆಯಲ್ಲಿ ದೈರ್ಯವೇ ಇರಲಿಲ್ವೇ? ಯಾರ ಒತ್ತಡದಿಂದ ಮಸೂದೆ ವಾಪಾಸ್ ಪಡೆಯಲಾಯಿತು?” ಎಂದು ಕೇಳಿದ್ದಾರೆ.

“ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವ ಸಕ್ಕರೆ ಸೇರಿದಂತೆ ಎಲ್ಲಾ ವ್ಯವಹಾರವನ್ನು ನಿಲ್ಲಿಸಲು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧೈರ್ಯ ಇದ್ಯಾ? ಬೀದಿಯಲ್ಲಿ ನಿಂತು ಬೊಬ್ಬೆ ಹಾಕುತ್ತಿರುವ ಬಿಜೆಪಿ, ಪಾಕಿಸ್ತಾನದ ನಂಟಸ್ತನದಿಂದ ರಾಜಕೀಯ ಬೇಳೆ ಬೆಳೆಸುತ್ತಿರುವುದು ಪುಲ್ವಾಮ ದಾಳಿಯಲ್ಲೇ ಸಾಬೀತಾಗಿದೆ. ರಾಜ್ಯದ ಜನರನ್ನ ಮೂರ್ಖರನ್ನಾಗಿ ಮಾಡಲು ಹೋಗಿ, ಮುಖವಾಡ ಬಯಲಾಗುತ್ತಿರುವುದು ಸ್ಪಷ್ಟವಾಗಿದೆ” ಎಂದು ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments