ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಮಾತಿಗೆ ಮೂರು ಪೈಸೆ ಕಿಮ್ಮತ್ತಿಲ್ಲ ಎನ್ನುವುದು ಕೂಡ ಬಿಜೆಪಿಯ ‘ಸದನ ಕದನ’ದಿಂದ ಬಯಲಾಗಿದೆ ಎಂದು ಕಾಂಗ್ರೆಸ್ ಕುಟುಕಿದೆ.
ಎಕ್ಸ್ ತಾಣದಲ್ಲಿ ಬಿಜೆಪಿಯನ್ನು ಟೀಕೆ ಮಾಡಿರುವ ಕಾಂಗ್ರೆಸ್, “ಯತ್ನಾಳ್ ಹೇಳಿದ್ದಕ್ಕೆ ಸಭಾತ್ಯಾಗ ಮಾಡಿದೆವು” ಎನ್ನುವ ಮೂಲಕ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಸನಗೌಡ ಅವರೇ ಎಂದು ಆರ್ ಅಶೋಕ
ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ!
ಬಿಜೆಪಿಯಲ್ಲಿ ಕೆಂಡದಂತಹ ಕಚ್ಚಾಟವಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ” ಎಂದು ಛೇಡಿಸಿದೆ.
ಡಿಯರ್ ಬಿಜೆಪಿ, ನಿಮ್ಮದು “ಮನೆಯೊಂದು ಮೂರು ಬಾಗಿಲಲ್ಲ, ಮುನ್ನೂರು ಬಾಗಿಲು” ಅಲ್ಲವೇ?” ಎಂದು ವ್ಯಂಗ್ಯವಾಗಿ ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು! ‘ಭ್ರಷ್ಟ ಜನತಾ ಪಾರ್ಟಿ’, ‘ಬ್ಲಾಕ್ಮೇಲ್ ಜನತಾ ಪಾರ್ಟಿ’, ‘ಬ್ಲೂ ಬಾಯ್ಸ್ ಜನತಾ ಪಾರ್ಟಿ’ ಈಗ ಹೊಸದಾಗಿ ‘ಬಕೆಟ್ ಜನತಾ ಪಾರ್ಟಿ!” ಎಂದು ಲೇವಡಿ ಮಾಡಿದೆ.
“ಬಕೆಟ್ ಬಕೆಟ್ ಬಕೆಟ್… ಅಶೋಕ್ ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವವರು” ಎಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್! ಹೇಳಿದ್ದಾರೆ. ಹೀಗಾಗಿ ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು -B ಬಕೆಟ್ Jಜನತಾ Pಪಾರ್ಟಿ!” ಎಂದು ಕುಟುಕಿದೆ.
“ಆರ್ ಅಶೋಕ ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್ ಹಿಡಿದಿರಿ? ಯಾವ ಬ್ರಾಂಡ್ ಬಕೆಟ್ ಹಿಡಿದಿರಿ? ಯಾರಿಗೆ ಬಕೆಟ್ ಹಿಡಿದು ನಿಮ್ಮ ಅಕ್ರಮಗಳನ್ನು ಮುಚ್ಚಿಕೊಂಡಿರಿ?” ಎಂದು ಬಿಜೆಪಿಯ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿಕೆಯ ವರದಿಯನ್ನು ಕಾಂಗ್ರೆಸ್ ಹಂಚಿಕೊಂಡಿದೆ.