ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಳನ್ನು ಸಂರಕ್ಷಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ನೀಡಲು ಸಹಾಯ ಮಾಡುವ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು
ರಾಜ್ಯ ಪೊಲೀಸ್ ಇಲಾಖೆಗೆ ನೇಮಕ ಮಾಡಲಾಗಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ 206 ಮಂದಿ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದು. ಇವರು ವಿಧಿ ವಿಜ್ಞಾನ ವಿಷಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ತಿಳಿಸಿದ್ದಾರೆ.
ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂರಕ್ಷಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ಪ್ಯಾಕ್ ಮಾಡಲು ತನಿಖಾಧಿಕಾರಿಗಳಿಗೆ ನೇಮಕಗೊಂಡಿರುವ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ.
ಸೀನ್ ಆಫ್ ಕ್ರೈಂ ಅಧಿಕಾರಿಗಳಿಗೆ ಈಗಾಗಲೇ ಅವರಿಗೆ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ ಎಸ್ ಎಲ್ ) ಎನ್ ಎಫ್ ಎಸ್ ಯು ಗುಜರಾತ್, ಕೆಪಿಎ ಬಾಂಬ್ ಪತ್ತೆ ದಳ, ಶ್ವಾನದಳ, ಸಿ.ಐ.ಡಿ, ಪೊರೆನ್ಸಿಕ್ ಮೆಡಿಸಿನ್ ಮುಂತಾದ ಕಡೆಗಳಲ್ಲಿ ತರಬೇತಿ ನೀಡಲಾಗಿದೆ. ಸೀನ್ ಆಫ್ ಕ್ರೈಂ ಅಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿದ್ದು ಜಿಲ್ಲೆಯ ಡಿಪಿಒ. ಕಛೇರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೃತ್ಯ ನಡೆದ ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡುತ್ತಾರೆ.
ರಾಜ್ಯದಲ್ಲಿ 13 ಮೊಬೈಲ್ ಫೋರೆನ್ಸಿಕ್ ವ್ಯಾನ್ಗಳಿದ್ದು ವಿಶೇಷವಾಗಿ ಪ್ರಯೋಗಾಲಯದಂತಹ ಪರಿಸರವನ್ನಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 16 ಬಗೆಯ ಕಿಟ್ಗಳು ಇದ್ದು ಅವುಗಳನ್ನು ವಿವಿಧ ರೀತಿಯ ಕ್ರೈಂ ಸೀನ್ಗಳಾದ ಕೊಲೆ, ಅತ್ಯಾಚಾರ, ಸ್ಪೋಟ, ಬೆಂಕಿ ಅವಘಡ, ಅಪಘಾತ, ಮಾದಕ ವಸ್ತುಗಳ ಕೇಸುಗಳಲ್ಲಿ ಬಳಸಬಹುದಾಗಿದೆ.
ಇದಲ್ಲದೆ ಕೆನೋಪಿ, ಜೆನರೇಟರ್, ಲೈಟ್ಗಳು, ಇರುವುದರಿಂದ ಹೊರಾಂಗಣದ ಕ್ರೈಂ ಸೀನ್ಗಳಲ್ಲಿ ಹೆಚ್ಚಿನ ಅವಧಿಯವರಗೆ ಕೆಲಸಮಾಡಲು ಸಹಾಯವಾಗುತ್ತದೆ.