ಚನ್ನಪಟ್ಟಣ ಚುನಾವಣಾ ಅಖಾಡಲ್ಲಿ ಇದೀಗ ಆಡಿಯೋ ಬಾಂಬ್ ವಿಚಾರ ಮುನ್ನೆಲೆಗೆ ಬಂದಿದೆ. ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಕುರಿತಾಗಿ ಮಾಜಿ ಸಂಸದ ಡಿ ಕೆ ಸುರೇಶ್ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಒಂದನ್ನು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ಸಿಪಿ ಯೋಗೇಶ್ವರ್ ಬಿಜೆಪಿಯಲ್ಲಿ ಇದ್ದ ಅವಧಿಯಲ್ಲಿ ಡಿಕೆ ಸುರೇಶ್ ತಮ್ಮ ಪಕ್ಷದ ಕಾರ್ಯಕರ್ತರ ಜೊತೆಗೆ ಮಾತನಾಡಿರುವ ಆಡಿಯೋ ಇದಾಗಿದೆ ಎನ್ನಲಾಗುತ್ತಿದೆ. ಈ ಆಡಿಯೋವನ್ನು ಸ್ವತಃ ಎಚ್ಡಿ ಕುಮಾರಸ್ವಾಮಿ ಸ್ವತಃ ಬಿಡುಗಡೆ ಮಾಡಿದ್ದಾರೆ.
‘ಮೆಗಾಸಿಟಿ ಹೆಸರಿನಲ್ಲಿ ಬಿಡದಿಯಲ್ಲಿ ಟೋಪಿ ಹಾಕಿದ್ದು ಮರೆತು ಹೋಗಿದ್ದಾನಾ?’ ಎನ್ನುವ ಮಾತು ಆಡಿಯೋದಲ್ಲಿ ಇದೆ.
“ಆಡಿಯೋದಲ್ಲಿ ಸಿಪಿವೈ ಟೋಪಿ ಹಾಕಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈಗ ಯಾರಿಗೆ ಟೋಪಿ ಹಾಕಲು ಕರೆದುಕೊಂಡು ಬಂದಿದ್ದಾರೆ? ಇವೆಲ್ಲಾ ಬಿಟ್ಟು ಬಿಡಿ. ನಾನು ಚನ್ನಪಟ್ಟಣದಲ್ಲಿ ಮಾಡಿದ 10 ಪರ್ಸೆಂಟ್ ಕೆಲಸ ನಿಮ್ಮ ಕೈಯಲ್ಲಿ ಮಾಡಲು ಆಗುತ್ತಾ” ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.