Homeಕರ್ನಾಟಕಮುಡಾ ಪ್ರಕರಣ | ನಾನು ದಾಖಲೆ ತಂದಿದ್ದರೆ ರಾಜೀನಾಮೆ ಕೊಡಲು ಸಿದ್ಧ: ಸಚಿವ ಬೈರತಿ ಸುರೇಶ್

ಮುಡಾ ಪ್ರಕರಣ | ನಾನು ದಾಖಲೆ ತಂದಿದ್ದರೆ ರಾಜೀನಾಮೆ ಕೊಡಲು ಸಿದ್ಧ: ಸಚಿವ ಬೈರತಿ ಸುರೇಶ್

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್​ನಲ್ಲಿ ನಾನೇನಾದರೂ ದಾಖಲೆ ತಂದಿದ್ದರೆ ರಾಜೀನಾಮೆ ಕೊಡಲು ಸಿದ್ಧ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, “ನಾನು ದಾಖಲೆ ತಂದಿಲ್ಲ ಎಂಬುದು ಸಾಬೀತಾದರೆ ನನ್ನ ಮೇಲೆ ಆರೋಪಿಸಿದವರು ಏನು ಮಾಡುತ್ತಾರೆ ಹೇಳಲಿ” ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ಗೆ ಸವಾಲು ಹಾಕಿದರು.

“20 ವರ್ಷದಿಂದ ತಪ್ಪುಗಳಾಗುತ್ತಾ ಬಂದಿದೆ. 2005ರವರೆಗಿನ ಎಲ್ಲ ವಿಚಾರ ತನಿಖೆಗೆ ಕೊಡಲು ಪ್ಲ್ಯಾನ್ ಮಾಡುತ್ತಿದ್ದೇನೆ. ಸುಮ್ಮ ಸುಮ್ಮನೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ಜೆಡಿಎಸ್​ ಶಾಸಕ ಜಿ ಟಿ ದೇವೇಗೌಡ ತನಿಖಾಧಿಕಾರಿನಾ” ಎಂದು ಪ್ರಶ್ನಿಸಿದರು.

ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, “ಐಎಎಸ್​ಅಧಿಕಾರಿಗಳಿಗೆ ಕೊಡದೆ ಬಿಜೆಪಿಗರಿಗೆ ಕೊಡಬೇಕಾ? ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಮುಚ್ಚಿ ಹಾಕಲ್ಲ, ಸರ್ಕಾರ ಯಾರನ್ನೂ ಬಿಡಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲ ಗೊತ್ತಾಗುತ್ತೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments