Homeಕರ್ನಾಟಕಉತ್ತರ ಕರ್ನಾಟಕದ ಸಮಸ್ಯೆ‌ ಚರ್ಚಿಸಿದರೆ ಸ್ಪಂದಿಸಲು‌ ಸರ್ಕಾರ ಸಿದ್ಧ: ಡಿ ಕೆ ಶಿವಕುಮಾರ್

ಉತ್ತರ ಕರ್ನಾಟಕದ ಸಮಸ್ಯೆ‌ ಚರ್ಚಿಸಿದರೆ ಸ್ಪಂದಿಸಲು‌ ಸರ್ಕಾರ ಸಿದ್ಧ: ಡಿ ಕೆ ಶಿವಕುಮಾರ್

ಬೆಳಗಾವಿ: ವಿರೋಧ ಪಕ್ಷದ ಶಾಸಕರಾಗಲಿ, ಆಡಳಿತ ಪಕ್ಷದ ಶಾಸಕರಾಗಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಸ್ಪಂದಿಸಲು‌ ಸರ್ಕಾರ ಸಿದ್ಧವಾಗಿದೆ‌ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ಬರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು‌ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದರು.

ಅಧಿವೇಶನದಲ್ಲಿ‌ ಉತ್ತರ ಕರ್ನಾಟಕದ ಸಮಸ್ಯೆಗಳ‌ ಬಗ್ಗೆ‌ ಚರ್ಚೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು‌ ಕರ್ನಾಟಕ, ಹಳೇ ಮೈಸೂರು ಕರ್ನಾಟಕ ಸೇರಿದಂತೆ ನಮ್ಮದು ಸಮಗ್ರ ಕರ್ನಾಟಕ. ವಿಧಾನಸಭೆಯಲ್ಲಿ ಚರ್ಚೆ ನಡೆಸಲು ನಾವು ಸದಾ ಸಹಕಾರ ನೀಡುತ್ತೇವೆ” ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆ‌‌ ವಿಭಜನೆಗೆ ಕೂಗು ಕೇಳಿ ಬರುತ್ತಿದ್ದು, ಇಂದು ಕರೆ ನೀಡಲಾಗಿರುವ ಬಂದ್ ಬಗ್ಗೆ ಕೇಳಿದಾಗ “ಸದನದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾವನೆ ಬಂದಾಗ‌ ಖಂಡಿತ ಚಿಂತನೆ ಮಾಡುತ್ತೇವೆ” ಎಂದರು.

ಸಾರ್ವಕರ್ ಫೋಟೊ ತೆರವು ವಿಚಾರ

ಪ್ರಿಯಾಂಕ್ ಖರ್ಗೆ‌ ಅವರು ವಿಧಾನಸಭೆಯಿಂದ ಸಾವರ್ಕರ್ ಭಾವಚಿತ್ರ ತೆರವುಗೊಳಿಸುವ ಹೇಳಿಕೆ‌ಗೆ ಬದ್ಧ ಎಂದು ಹೇಳಿದ್ದಾರೆ ಇದಕ್ಕೆ ಸರ್ಕಾರದ ನಿಲುವು ಏನು ಎಂದು ಕೇಳಿದಾಗ “ಅದು ಸದನದ ಮತ್ತು ಸಭಾಧ್ಯಕ್ಷರ ಸ್ವತ್ತು. ಈ ವಿಚಾರವಾಗಿ ಆನಂತರ ಮಾತನಾಡುತ್ತೇನೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments