Homeಕರ್ನಾಟಕಅಭಯ್ ಪಾಟೀಲ್‌ಗೆ ಮತದಾರರ ಡಿಲೀಟ್ ಆರೋಪ: ಹರಿಪ್ರಸಾದ್

ಅಭಯ್ ಪಾಟೀಲ್‌ಗೆ ಮತದಾರರ ಡಿಲೀಟ್ ಆರೋಪ: ಹರಿಪ್ರಸಾದ್

ಬಿಜೆಪಿ ಶಾಸಕ ಅಭಯ್ ಪಾಟೀಲ್ ಬೆಳಗಾವಿಯಲ್ಲಿ 2,500 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಪತ್ರ ಬರೆದಿರುವದನ್ನು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಈ ಮತದಾರರು ಅಲ್ಪಸಂಖ್ಯಾತರು. ಇಂತಹ ಮತಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗಳಿಗೆ ಸಾಕ್ಷಿ ಸಮೇತ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, “ಮತಗಳ್ಳತನವಾಗುತ್ತಿದೆ ಎಂದು ನಾವು ಹೇಳುತ್ತಲೇ ಇದ್ದೇವೆ. ಈ ಪತ್ರಕ್ಕೆ ಚುನಾವಣಾ ಆಯೋಗ ಪತ್ರ ಬರೆದು, ನಾವು ಈ ರೀತಿ ಮತದಾರರ ಹೆಸರು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಒಂದೇ ಮನೆಯಲ್ಲಿ 50 ಮಂದಿಯ ಮತ ತೆಗೆಯಲು ಅರ್ಜಿ ನೀಡಲಾಗಿದೆ. ಬೋಗಸ್ ಅರ್ಜಿ ಸಲ್ಲಿಸಿದರೆ ಶಿಕ್ಷಾರ್ಹರು ಎಂದು ತಿಳಿಸಲಾಗಿದೆ” ಎಂದು ಹೇಳಿದರು.

“ಫಾರಂ 7 ಸಲ್ಲಿಸಿ ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಅರ್ಜಿ ಹಾಕಿರುವವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಶಾಸಕ ಅಭಯ್ ಪಾಟೀಲ್ ಅವರ ಪತ್ರ ನಮ್ಮ ಬಳಿ ಇದೆ. ಬೇರೆಯವರ ಮತ ತೆಗೆಯುವಂತೆ ಪತ್ರ ನೀಡಲು ಯಾರಿವರು? ಕಾನೂನು ಮೀರಿ ಶಾಸಕರೇ ಬಲ್ಕ್ ಡಿಲೀಷನ್‌ಗೆ ಪತ್ರ ನೀಡಿದ್ದಾರೆ. ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ” ಎಂದರು.

ಸುಮಾರು 7 ಸಾವಿರ ಹೆಸರು ಡಿಲೀಟ್ ಮಾಡಲು ಅರ್ಜಿ ಹಾಕಲಾಗಿದ್ದು, ಯಾವುದಕ್ಕೂ ಸಹಿ ಇಲ್ಲ ಎಂದು ಹರಿಪ್ರಸಾದ್ ಆರೋಪಿಸಿದರು. ಫಾರಂ 7ನ್ನು ದುರುಪಯೋಗ ಮಾಡಿಕೊಂಡಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

“ಬಿಜೆಪಿ ನಿಜ ಸ್ವರೂಪ ಹೊರಬರುತ್ತಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರು 13 ಕೋಟಿ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ಮುಂದಾಗಿರುವುದಕ್ಕೆ ಇದು ಸಣ್ಣ ಉದಾಹರಣೆ. ಅವರ ಕಾರ್ಯಕರ್ತರು ಮತ್ತು ಅಂಧಭಕ್ತರು ಈ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಎಚ್ಚರಿಕೆ ವಹಿಸಬೇಕು. ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನೈಜ ಮತದಾರರ ಮತದಾನದ ಹಕ್ಕು ಕಸಿಯುವ ಹುನ್ನಾರ ನಡೆಸುತ್ತಿವೆ” ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments