ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕ್ಯಾಬಿನೆಟ್ ವಿಸ್ತರಣೆ ಬಳಿಕ ಭುಗಿಲೆದ್ದ ಅಸಮಾಧಾನದ ನಡುವೆ ಕೊನೆಗೂ ಇದೀಗ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಸಚಿವರಿಗೆ ಆಯಾ ಇಲಾಖೆಗಳನ್ನು ಹಂಚಿಕೆ ಮಾಡಿರುವ ಕುರಿತು ಪ್ರಕಟ ಮಾಡಲಾಗಿದೆ.
ಚಲುವರಾಯಸ್ವಾಮಿ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ, ಜಮೀರ್ ಅಹ್ಮದ್ ಅವರಿಗೆ ವಸತಿ ಇಲಾಖೆ ನೀಡಲಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ರಾಮಲಿಂಗಾರೆಡ್ಡಿಯವರಿಗೆ ನೀರಾವರಿ ಬದಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ,
ಗುಪ್ತಚರ, ಮಾಹಿತಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನ, ಕೃಷಿ ಮಾರುಕಟ್ಟೆ, ಟೌನ್ ಮತ್ತು ಕಂಟ್ರಿ ಪ್ಲಾನಿಂಗ್, ಬಿಬಿಎಂಪಿ ವ್ಯಾಪ್ತಿಗೆ ಹೊರತಾದ ನಗರ ಸ್ಥಳೀಯ ಸಂಸ್ಥೆಗಳು, ಬಿಡಿಎ ಮತ್ತು ಬಿಎಂಆರ್ಡಿಎ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಹಂಚಿಕೆಯಾಗದ ಎಲ್ಲ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಯಾರಿಗೆ ಯಾವ ಖಾತೆ?
1- ಬಿ.ಜೆಡ್. ಜಮೀರ್ ಅಹ್ಮದ್ ಖಾನ್: ವಸತಿ
2- ರಾಮಲಿಂಗಾ ರೆಡ್ಡಿ: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ
3- ಲಕ್ಷ್ಮಣ ಸವದಿ: ಸಹಕಾರ (ಕೃಷಿ ಮಾರುಕಟ್ಟೆ ಹೊರತುಪಡಿಸಿ)
4- ರುದ್ರಪ್ಪ ಮಾನಪ್ಪ ಲಮಾಣಿ: ಸಕ್ಕರೆ ಮತ್ತು ಜವಳಿ
5- ಕೆ.ಎಚ್.ಮುನಿಯಪ್ಪ: ಸಮಾಜ ಕಲ್ಯಾಣ
6- ಶಿವರಾಜ್ ತಂಗಡಗಿ: ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
7- ಯು.ಟಿ. ಖಾದರ್: ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
8- ಟಿ. ರಘುಮೂರ್ತಿ: ಪರಿಶಿಷ್ಟ ಪಂಗಡಗಳ ಕಲ್ಯಾಣ
9- ಡಾ. ಅಜಯ್ ಸಿಂಗ್: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ
10- ಚೆಲುವರಾಯಸ್ವಾಮಿ: ಬೃಹತ್ ಮತ್ತು ಮಧ್ಯಮ ನೀರಾವರಿ
11- ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
12- ಬಸವರಾಜ ರಾಯರಡ್ಡಿ: ಉನ್ನತ ಶಿಕ್ಷಣ
13- ಶಿವಲಿಂಗೇಗೌಡ: ಅಬಕಾರಿ
14- ಪುಟ್ಟರಂಗಶೆಟ್ಟಿ: ಪಶುಸಂಗೋಪನೆ ಮತ್ತು ರೇಷ್ಮೆ ಕೃಷಿ
15- ವಿಜಯಾನಂದ ಕಾಶಪ್ಪನವರ: ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು
16- ಸಂತೋಷ್ ಲಾಡ್: ಕಾರ್ಮಿಕ ಮತ್ತು ಉದ್ಯೋಗ
17- ಕೆ.ಎಸ್. ಬಸವಂತಪ್ಪ: ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ
18- ಎಸ್.ಎಸ್. ಮಲ್ಲಿಕಾರ್ಜುನ: ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ
19- ರಿಜ್ವಾನ್ ಅರ್ಷದ್: ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
20- ನರೇಂದ್ರ ಸ್ವಾಮಿ: ಕೃಷಿ
21- ಎಚ್.ಸಿ. ಬಾಲಕೃಷ್ಣ: ಪೌರಾಡಳಿತ
22- ಬಿ. ನಾಗೇಂದ್ರ: ಯೋಜನೆ ಮತ್ತು ಸಾಂಖ್ಯಿಕ





