Homeಕರ್ನಾಟಕಅಪಘಾತದಲ್ಲಿ ಗಾಯಗೊಂಡವರ ಜೀವ ರಕ್ಷಣೆಗೆ ಧಾವಿಸಿದ ಕೆ ಆರ್ ರಮೇಶ್ ಕುಮಾರ್ & ಕೆ ವಿ...

ಅಪಘಾತದಲ್ಲಿ ಗಾಯಗೊಂಡವರ ಜೀವ ರಕ್ಷಣೆಗೆ ಧಾವಿಸಿದ ಕೆ ಆರ್ ರಮೇಶ್ ಕುಮಾರ್ & ಕೆ ವಿ ಪ್ರಭಾಕರ್

ಮೈಸೂರ-ಬೆಂಗಳೂರ ಹೈವೆಯಲ್ಲಿ ಕಾರ್ ಅಪಘಾತದಲ್ಲಿ ಗಾಯಗೊಂಡವರನ್ನು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಮತ್ತು ನಿಕಟಪೂರ್ವ ಸಿಎಂ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ಅವರು ಆಸ್ಪತ್ರೆಗೆ ಕಳುಹಿಸಿದರು.

ಇಂದು ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಹೈವೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾಜಿ ಸ್ಪೀಕರ್ ಕಾರ್ ನ ಕಣ್ಣತೆ ದೂರದಲ್ಲಿ ಚಾಲಕನ ಅಚಾತುರ್ಯದಿಂದ ಡಿವೈಡರ್ ಗೆ ವೇಗವಾಗಿ ಗುದ್ದಿದ್ದರಿಂದ ಕಾರ್ ಡಿವೈಡರ್ ಆಚೆ ಜಂಪ್ ಮಾಡಿ ಪಲ್ಟಿಯಾಗಿ ಬಿದ್ದಿತು.
ಅದೃಷ್ಠವಶಾತ್ ಕಾರಿನಲ್ಲಿದ್ದ ಯಾವ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿಲ್ಲ, ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸಲಾಯಿತು.

ಗಾಯಾಳುಗಳನ್ನು ಕಾರಿನಿಂದ ಹೊರಗೆ ತಂದು, ಧೈರ್ಯ ಹೇಳಿ ಆಸ್ಪತ್ರೆಗೆ ಸಾಗಿಸುವಲ್ಲಿ ರಮೇಶ್ ಕುಮಾರ್ ಅವರು ಸ್ಥಳೀಯ ಯುವಕರಿಗೆ ಸಹಾಯ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments