Homeಕರ್ನಾಟಕರಾಜ್ಯ ರಾಜಕಾರಣಕ್ಕೆ ಹೆಚ್ ಡಿ ಕುಮಾರಸ್ವಾಮಿ, ಚನ್ನಪಟ್ಟಣದಿಂದ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ

ರಾಜ್ಯ ರಾಜಕಾರಣಕ್ಕೆ ಹೆಚ್ ಡಿ ಕುಮಾರಸ್ವಾಮಿ, ಚನ್ನಪಟ್ಟಣದಿಂದ ಸ್ಪರ್ಧೆ: ನಿಖಿಲ್ ಕುಮಾರಸ್ವಾಮಿ

ಕುಮಾರಣ್ಣನವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಮತ್ತೆ ರಾಜ್ಯ ರಾಜಕಾರಣಕ್ಕೆ ಒಂದಲ್ಲ ಒಂದು ದಿನ ಬರಲೇಬೇಕಾಗುತ್ತದೆ ಎಂದು ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಣ್ಣ ಅವರು ನಿರೀಕ್ಷಿತವಾಗಿ ಸಂಸತ್ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಬೇಕಾಯ್ತು. ಕುಮಾರಣ್ಣನಿಗೆ ಕಾರ್ಯಕರ್ತರು ಇಲ್ಲೇ ಸ್ಪರ್ಧೆ ಮಾಡಿ ಅಂತ ಬೇಡಿಕೆ ಇಟ್ಟಿರೋದಕ್ಕೆ ನಾನೇ ಸಾಕ್ಷಿ. ಇದು ಚನ್ನಪಟ್ಟಣ ಜನರ ಅಭಿಲಾಷೆ ಎಂದು ಹೇಳಿದರು.

ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಲವೇ ತಿರ್ಮಾನ ಮಾಡುತ್ತದೆ. ನಾವು ಎನ್‌ಡಿಎ ಮೈತ್ರಿ ಕೂಟದಲ್ಲಿದ್ದೇವೆ. ಯಾವ ಕ್ಷೇತ್ರವನ್ನ ಜೆಡಿಎಸ್‌ಗೆ ಬಿಟ್ಟು ಕೊಡುತ್ತಾರೆ. ಯಾರ್ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದು 2028ಕ್ಕೆ ತಿರ್ಮಾನ ಆಗುತ್ತದೆ ಎಂದು ತಿಳಿಸಿದರು.

ರಾಜ್ಯದ ಜನರ ಮನಸ್ಸಿನಲ್ಲಿ ಕುಮಾರಸ್ವಾಮಿ ಸಿಎಂ ಆಗಬೇಕು ಎಂಬ ಭಾವನೆವಿದೆ

ಮುಂದಿನ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಎಂಬ ವಿಚಾರಕ್ಕೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು, ರಾಜ್ಯದ ಜನರ ಮನಸ್ಸಿನಲ್ಲಿ ಕುಮಾರಸ್ವಾಮಿ ಸಿಎಂ ಆಗಬೇಕು ಎಂಬ ಭಾವನೆ ಇದೆ. ಈ ಬಗ್ಗೆ NDA ಮೈತ್ರಿಕೂಟದ ರಾಷ್ಟ್ರ ಹಾಗೂ ರಾಜ್ಯ ನಾಯಕರು ತಿರ್ಮಾನ ಮಾಡುತ್ತಾರೆ. ಸಿಎಂ ಆಗೋ ವಿಚಾರ ಇನ್ನೂ ಬಹಳ ದೂರ ಇದೆ. ಕಾಲ ಬರುವವರೆಗೂ ಕಾದು ನೋಡೋಣ ಎಂದರು.

ಶಾಸಕ ಎಸ್‌.ಟಿ. ಸೋಮಶೇಖರ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

ಚನ್ನಪಟ್ಟಣ ಕ್ಷೇತ್ರವನ್ನ ಹೆಚ್‌ಡಿಕೆ ಅಭಿವೃದ್ಧಿ ಮಾಡಿಲ್ಲ ಎಂದು ಎಸ್‌.ಟಿ. ಸೋಮಶೇಖರ್ ಟೀಕೆ ವಿಚಾರಕ್ಕೆ ಮಾತನಾಡಿದ ಅವರು ; ಅವರಿಗೆ ಯಶವಂತಪುರ ಕ್ಷೇತ್ರದ ಕಾರ್ಯಕರ್ತರೇ ಉತ್ತರ ಕೊಡುತ್ತಾರೆ. ಅಭಿವೃದ್ಧಿ ಆಧಾರ ಮೇಲೆ ಓಟ್ ಹಾಕುತ್ತಿಲ್ಲ. ಒಂದು ವರ್ಗದ ಮುಗ್ದ ಜನರಿಗೆ ರಾತ್ರೋರಾತ್ರಿ ಕೂಪನ್, ಫುಡ್‌ಕಿಟ್ ಕೊಟ್ಟು ದಾರಿತಪ್ಪಿಸಿ ಓಟ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕರ ಸೋಮಶೇಖರ್ ವಿರುದ್ಧ ಕಿಡಿಕರಿದರು.

ಇಂತಹ ಕಾಲಕ್ಕೆ ನಾವು ಬಂದಿದ್ದೇವೆ.ಆದರೆ ಕುಮಾರಣ್ಣ ಏಳು ವರ್ಷದಲ್ಲಿ 1200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಎಸ್‌ ಟಿ. ಸೋಮಶೇಖರ್ ಅವರಿಗೆ ಮಾಹಿತಿ ಕೊರತೆಯಿದೆ. ಅವರಿಗೆ ನಾನೇ ಅಭಿವೃದ್ಧಿ ಲೀಸ್ಟ್‌ಗಳನ್ನ ಅವರ ಮನೆಗೆ ಕೊರಿಯರ್ ಮಾಡುತ್ತೇನೆ ಎಂದು ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments