Homeಕರ್ನಾಟಕಇರಾನ್ ರಾಷ್ಟ್ರದ ಅತ್ಯಂತ ಎತ್ತರದ ಸೇತುವೆ ಧ್ವಂಸಗೊಳಿಸಿದ ಅಮೆರಿಕ ಸೇನೆ

ಇರಾನ್ ರಾಷ್ಟ್ರದ ಅತ್ಯಂತ ಎತ್ತರದ ಸೇತುವೆ ಧ್ವಂಸಗೊಳಿಸಿದ ಅಮೆರಿಕ ಸೇನೆ

ಇರಾನ್ ರಾಷ್ಟ್ರದ ಅತ್ಯಂತ ಎತ್ತರದ ಹಾಗೂ ಪ್ರಮುಖವಾದ ಬಿ1 ಸೇತುವೆಯನ್ನು ಅಮೆರಿಕ ಸೇನೆ ಧ್ವಂಸಗೊಳಿಸಿದ್ದು, ಈ ಮೂಲಕ ಮತ್ತಷ್ಟು ದಾಳಿಯ ಮುನ್ಸೂಚನೆಯನ್ನು ನೀಡಿದೆ. ಅಲ್ಲದೆ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬರುವಂತೆಯೂ ಎಚ್ಚರಿಕೆ ನೀಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ಟೆಹ್ರಾನ್‌ಗೆ ಎಚ್ಚರಿಕೆ ನೀಡಿ, “ತಡವಾಗುವ ಮುನ್ನ ಇರಾನ್ ಶಾಂತಿಯ ಒಪ್ಪಂದಕ್ಕೆ ಬರಬೇಕು, ಇಲ್ಲದಿದ್ದರೆ ದೇಶದ ಭವಿಷ್ಯ ನಾಶವಾಗಲಿದೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಸೇತುವೆ ಮೇಲೆ ನಡೆಸಲಾಗಿರುವ ದಾಳಿಯ ವೀಡಿಯೋವನ್ನೂ ಟ್ರಂಪ್ ಅವರು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಸೇತುವೆ ಬೆಂಕಿಗಾಹುತಿಯಾಗಿ ದಟ್ಟ ಹೊಗೆಯಿಂದ ಆವರಿಸಿಕೊಂಡಿರುವುದು ಕಂಡು ಬಂದಿದೆ. ವೀಡಿಯೋದಲ್ಲಿ ಸೇತುವೆಗೆ ಸಂಭವಿಸಿದ ಹಾನಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಈ ಮೂಲಕ ಇರಾನ್ ತನ್ನ ನಿಲುವು ಬದಲಾಯಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ದಾಳಿಗೆ ಯಾರು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರಂಪ್ ಹೇಳಿಕೆಗಳಿಂದ ಅಮೆರಿಕ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದರೂ, ಯಾವುದೇ ದೇಶವೂ ಅಧಿಕೃತವಾಗಿ ಹೊಣೆ ಹೊತ್ತುಕೊಂಡಿಲ್ಲ.

ಇರಾನ್ ಟಿವಿ ವರದಿ ಪ್ರಕಾರ, ಅಮೆರಿಕಾ-ಇಸ್ರೇಲ್ ಸೇತುವೆ ಮೇಲೆ ಎರಡು ಬಾರಿ ದಾಳಿ ಮಾಡಿದೆ ಎಂದು ತಿಳಿಸಿವೆ. ಮೊದಲ ದಾಳಿಯಲ್ಲಿ ಇಬ್ಬರು ನಾಗೀರಕರು ಸಾವನ್ನಪ್ಪಿದ್ದಾರೆ. ಮೊದಲ ದಾಳಿ ಬಳಿಕ ತುರ್ತು ನೆರವಿಗೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಎರಡನೇ ಬಾರಿ ದಾಳಿ ನಡೆಯಿತು ಎಂದು ತಿಳಿಸಿವೆ.

ನಿರ್ಮಾಣದಲ್ಲಿದ್ದ ಬಿ1 ಸೇತುವೆ ಅತಿ ಎತ್ತರದ ಸೇತುವೆಯಾಗಿತ್ತು ಎನ್ನಲಾಗುತ್ತಿದ್ದು. ಇದರ ಎತ್ತರ 447 ಅಡಿ (136 ಮೀಟರ್) ಇದೆ ಎನ್ನಲಾಗಿದೆ. ಇದೀಗ ಈ ಸೇತುವೆ ಸಂಪೂರ್ಣ ನಾಶವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments