ಇರಾಕ್ನ ಬಸ್ರಾ ಕರಾವಳಿಯ ಸಮೀಪ ತೈಲ ಟ್ಯಾಂಕರ್ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಅಮೆರಿಕದ ಕಂಪನಿಗೆ ಸೇರಿದ ಸಫೇಸಿಯಾ ವಿಷ್ಣು ಎಂಬ ತೈಲ ಟ್ಯಾಂಕರ್ ಮೇಲೆ ಇರಾನ್ ಮೂಲದ ಆತ್ಮಹತ್ಯಾ ದೋಣಿ ಮೂಲಕ ದಾಳಿ ನಡೆದಿದ್ದು, ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ದಕ್ಷಿಣ ಇರಾಕ್ನ ಖೋರ್ ಅಲ್ ಜುಬೈರ್ ಬಂದರು ಸಮೀಪ ಈ ದಾಳಿ ನಡೆದಿದೆ. ಸರಕು ವರ್ಗಾವಣೆ ನಡೆಯುವ ಪ್ರದೇಶದಲ್ಲೇ ದಾಳಿ ನಡೆದಿದೆ ಎಂದು ಇರಾಕ್ ಬಂದರುಗಳ ಸಾಮಾನ್ಯ ಕಂಪನಿಯ ಮಹಾನಿರ್ದೇಶಕ ಫರ್ಹಾನ್ ಅಲ್ ಫರ್ತೂಸಿ ತಿಳಿಸಿದ್ದಾರೆ.
ದಾಳಿಯಲ್ಲಿ ಒಬ್ಬ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಉಳಿದ 27 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಬಸ್ರಾಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.


