ಕುಖ್ಯಾತ ಮಾದಕವಸ್ತು ದೊರೆ ಎಲ್ ಮೆಂಚೊ ನನ್ನು ಮೆಕ್ಸಿಕೋ ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ದೇಶದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ದೃಢಪಡಿಸಿದೆ.
ಮಾದಕವಸ್ತು ದೊರೆ ನೆಮೆಸಿಯೊ “ಎಲ್ ಮೆಂಚೊ” ಒಸೆಗುರಾನನ್ನು ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ ಘೋಷಿಸಿದೆ.
ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ನ 59 ವರ್ಷದ ಎಲ್ ಮಂಚೋ ಒಸೆಗುರಾ, ಜಲಿಸ್ಕೊ ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡು ಮೆಕ್ಸಿಕೊ ನಗರಕ್ಕೆ ಕರೆದೊಯ್ಯುವಾಗ ಸಾವನ್ನಪ್ಪಿದರು ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಅತನಿಗೆ 15 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಘೋಷಿಸಲಾಗಿತ್ತು. ಕಾರ್ಯಾಚರಣೆಯ ಸುದ್ದಿ ಬಹಿರಂಗವಾದ ನಂತರ ಜಲಿಸ್ಕೊ ಮತ್ತು ಇತರ ರಾಜ್ಯಗಳಲ್ಲಿ ಡ್ರಗ್ ಕಾರ್ಟೆಲ್ಗಳಿಂದ ರಸ್ತೆ ತಡೆ ಮತ್ತು ಹಿಂಸಾಚಾರ ಭುಗಿಲೆದ್ದಿದೆ.


