Homeಕರ್ನಾಟಕರೈತರಿಗೆ 105 ಕೋಟಿ ರೂ. ಎಂಬುದು ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ: ಬೊಮ್ಮಾಯಿ ಟೀಕೆ

ರೈತರಿಗೆ 105 ಕೋಟಿ ರೂ. ಎಂಬುದು ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ: ಬೊಮ್ಮಾಯಿ ಟೀಕೆ

ಮುಖ್ಯಮಂತ್ರಿಗಳೇ ತಾವು ಬಿಡುಗಡೆ ಮಾಡಿರುವ 105 ಕೋಟಿ ಎಷ್ಟು ಲಕ್ಷ ಜನ ರೈತರಿಗೆ ತಲುಪಲಿದೆ. ಅರೆಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಳೆ ಪರಿಹಾರವಾಗಿ 105 ಕೋಟಿ ರೂ. ಮಂಜೂರು ಮಾಡಿರುವ ಸರ್ಕಾರದ ಕ್ರಮ ವಿರೋಧಿಸಿ ಎಕ್ಸ್‌ ತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಅಗಾಧ ಪ್ರಮಾಣದ ಬರ ಮತ್ತು ತಾವು ಬಿಡುಗಡೆ ಮಾಡಿರುವ ಹಣವನ್ನು ನೋಡಿದರೆ, ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ” ಎಂದು ಟೀಕಿಸಿದ್ದಾರೆ.

“ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣದ ಬಗ್ಗೆ ನಾವೂ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದರೆ, ನಿಮ್ಮನ್ನು ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಕುಂದರಿಸಿರುವ ರೈತಾಪಿ ವರ್ಗವನ್ನು ರಕ್ಷಿಸುವಂತದ್ದು ನಿಮ್ಮ ಕರ್ತವ್ಯ ನೀವು ಕೂಡಲೇ ಸಂಪೂರ್ಣವಾಗಿರುವ ಹಣವನ್ನು ಬಿಡಿಗಡೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

“ಈಗಾಗಲೇ ಸಾಕಷ್ಟು ಕಾಲಹರಣವನ್ನು ಮಾಡಿರುತ್ತೀರಿ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮ ಇದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ನಿಮ್ಮ ಸರ್ಕಾರ ಯಾಕೆ ರೈತರ ಪರಿಹಾರವನ್ನು ಪೂರ್ಣ ಬಿಡುಗಡೆ ಮಾಡುತ್ತಿಲ್ಲ.
ಕೇಂದ್ರ ಸರ್ಕಾರಕ್ಕೆ 18000 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿರುವ ರಾಜ್ಯ ಸರ್ಕಾರ 105 ಕೋಟಿ ಬಿಡುಗಡೆ ಮಾಡಿದ್ದು ಶೇ.1 ರಷ್ಟು ಆಗಿಲ್ಲ. ಮಾತಿನಲ್ಲಲ್ಲಾ ಕೃತಿಯಲ್ಲಿ ನಿಮ್ಮ ಬದ್ದತೆ ತೋರಿಸಬೇಕು” ಎಂದು ಕುಟುಕಿದ್ದಾರೆ.

“ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ನಾವು ಕೇವಲ ಎರಡು ತಿಂಗಳಲ್ಲಿ ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಒಟ್ಟು 2031 ಕೋಟಿ ನಾವು ಬಿಡುಗಡೆ ಮಾಡಿದ್ದೇವೆ ಹೀಗಾಗಿ ಈ ಪ್ರಶ್ನೆ ಕೇಳುವ ಹಕ್ಕು ನಮಗಿದೆ. ರೈತರ ಪರವಾಗಿ ಅವರ ಹಿತಾಸಕ್ತಿ ಕಾಪಾಡುವುದು ಮತ್ತು ಅವರ ಹಕ್ಕನ್ನು ಕೊಡಿಸುವುದರಲ್ಲಿಯೇ ನನ್ನ ರಾಜಕೀಯ ಅಸ್ತಿತ್ವ ಇದೆ ಎಂದು ನಾನು ನಂಬಿದ್ದೇನೆ‌. ಅದಕ್ಕಾಗಿ ಸದಾ ನಾನು ರೈತರ ಪರ ಧ್ವನಿ ಎತ್ತಲು ಸಿದ್ದನಿದ್ದೇನೆ” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments