Homeಕರ್ನಾಟಕವಿಪ್ರೋ- ಕವಾಸಕಿ ಕಂಪನಿಯಿಂದ ₹1,000 ಕೋಟಿ ಹೂಡಿಕೆ: ಎಂ‌ ಬಿ ಪಾಟೀಲ

ವಿಪ್ರೋ- ಕವಾಸಕಿ ಕಂಪನಿಯಿಂದ ₹1,000 ಕೋಟಿ ಹೂಡಿಕೆ: ಎಂ‌ ಬಿ ಪಾಟೀಲ

ಹಾರೋಹಳ್ಳಿಯಲ್ಲಿ ನೂತನ ಹೈಡ್ರಾಲಿಕ್ ಪಂಪ್ ಉತ್ಪಾದನಾ ಘಟಕ ಸ್ಥಾಪನೆ

ಹೈಡ್ರಾಲಿಕ್ ಪಂಪ್ ತಯಾರಿಕೆಗೆ ಹೆಸರಾಗಿರುವ ವಿಪ್ರೋ‌ – ಕವಾಸಕಿ ಪ್ರಿಸಿಷನ್ ಮಷಿನರಿ ಕಂಪನಿಯು ಹಾರೋಹಳ್ಳಿಯ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲು ಮುಂದೆ ಬಂದಿದೆ. ಇದಕ್ಕಾಗಿ ಕಂಪನಿಯು 1,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಇದರಿಂದ 1,200 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಖನಿಜ ಭವನದಲ್ಲಿ ಭೇಟಿಯಾದ ಕಂಪನಿಯ ಸಿಇಒ ಮಿನೋರು ಹತ್ಸುದ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜೊತೆ ಅವರು ಮಾತುಕತೆ ನಡೆಸಿದರು. ಈ ಬಗ್ಗೆ ಮಾತನಾಡಿದ ಪಾಟೀಲ, ಜಪಾನ್ ಮೂಲದ ಕವಾಸಕಿ ಕಂಪನಿ, ವಿಪ್ರೊ ಜತೆ ಸೇರಿ 30 ಎಕರೆ ಭೂಮಿ‌ ಕೇಳಿವೆ.‌ ಇದನ್ನು ನಾವು ತ್ವರಿತವಾಗಿ ಒದಗಿಸುತ್ತೇವೆ. ನೂತನ ಉತ್ಪಾದನಾ ಸ್ಥಾವರವು ಇನ್ನು ಒಂದು ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.

ಕಂಪನಿಯು ಈಗ ಕುಂಬಳಗೋಡಿನಲ್ಲಿ ಬಾಡಿಗೆ ಆಧಾರದಲ್ಲಿ ಒಂದು ತಯಾರಿಕಾ ಘಟಕ ಹೊಂದಿದ್ದು, ಅಲ್ಲಿ ವರ್ಷಕ್ಕೆ 80 ಸಾವಿರ ಹೈಡ್ರಾಲಿಕ್ ಪಂಪ್ ತಯಾರಿಸಲಾಗುತ್ತಿದೆ. ಉದ್ದೇಶಿತ ಘಟಕವು ಕಂಪನಿಯ ತಯಾರಿಕಾ ಚಟುವಟಿಕೆಯ ವಿಸ್ತರಣೆಯಾಗಿದೆ. ಇಲ್ಲಿ ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚು ಹೈಡ್ರಾಲಿಕ್ ಪಂಪ್‌ಗಳನ್ನು ತಯಾರಿಸಿ, ಮಾರುಕಟ್ಟೆಗೆ ಪೂರೈಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಪ್ರೋ ಕವಾಸಕಿ ಕಂಪನಿಯ ಈ ಯೋಜನೆ ಆಕರ್ಷಕವಾಗಿದೆ. ಹೀಗಾಗಿ ಕಂಪನಿಗೆ ಈಗಿನಿಂದಲೇ ಅಗತ್ಯ ಕೆಲಸಗಳನ್ನು ಆರಂಭಿಸುವಂತೆ ಕೋರಲಾಗಿದೆ. ಈ ಹೂಡಿಕೆ ಯೋಜನೆಗೆ ಮುಂದಿನ ಸಭೆಯಲ್ಲಿ ಅಂತಿಮ ಅನುಮೋದನೆ ಕೊಡಲಾಗುವುದು ಎಂದು ಪಾಟೀಲ ಹೇಳಿದ್ದಾರೆ.

ಈ ಹೈಡ್ರಾಲಿಕ್ಸ್ ಪಂಪ್ ಗಳನ್ನು ಜೆಸಿಬಿ ಸೇರಿದಂತೆ ಇತರ ಭೂ ಸಂಬಂಧಿ ಕಾಮಗಾರಿಗಳನ್ನು ನಡೆಸಲು ಉಪಯೋಗಿಸುವ ಯಂತ್ರಗಳಲ್ಲಿ ಬಳಸಲಾಗುತ್ತದೆ.

ಮಾತುಕತೆಯಲ್ಲಿ ಕಂಪನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್. ರಾಜೇಶ್, ಸಿಎಫ್ಒ ಉದಯ ರಾಘವನ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments