Homeಕರ್ನಾಟಕಅಕ್ಕಿ ಕೊಡಲು ನಾವು ಸಿದ್ಧ, ಖರೀದಿಸಲು ಸರ್ಕಾರ ಬಳಿ ದುಡ್ಡು ಇದೆಯಾ: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಅಕ್ಕಿ ಕೊಡಲು ನಾವು ಸಿದ್ಧ, ಖರೀದಿಸಲು ಸರ್ಕಾರ ಬಳಿ ದುಡ್ಡು ಇದೆಯಾ: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ಕೇಂದ್ರ ಸರ್ಕಾರ ಬೇಕಾದಷ್ಟು ಅಕ್ಕಿಯನ್ನು ನೀಡಲು ಸಿದ್ದವಿದೆ. ಆದ್ರೆ ಖರೀದಿಗೆ ಕರ್ನಾಟಕ ಸರ್ಕಾರದಲ್ಲಿ ಹಣವಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಗ್ಯಾರಂಟಿಗೆ ಹಣ ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಣುಕಾಡುತ್ತಿದ್ದಾರೆ. ಈ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿಯವರ ಮೇಲೆ ಹಾಕುತ್ತಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ದಿ ಕಡೆಗೆ ಗಮನ ಕೊಟ್ಟರೆ ಉತ್ತಮ” ಎಂದರು.

“ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ದಾಸ್ತಾನು ಇರಲಿ ಎನ್ನುವ ಕಾರಣಕ್ಕಾಗಿ ಕಳೆದ ವರ್ಷದ ಜೂನ್ 13ಕ್ಕೆ ಮುಕ್ತ ಮಾರುಕಟ್ಟೆ ಪದ್ದತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಈಗ ಪರಿಸ್ಥಿತಿ ಸುಧಾರಿಸಿರುವುದರಿಂದ ಅಕ್ಕಿಯನ್ನು ಕೊಡಲು ಕೇಂದ್ರ ಶಕ್ತವಾಗಿದೆ” ಎಂದು ಜೋಶಿ ತಿಳಿಸಿದರು.

“ಕಳೆದ ವರ್ಷ ಕೇಂದ್ರದಿಂದ ಅಕ್ಕಿ ಬಂದಿಲ್ಲ ಎಂದು ಸಿದ್ದರಾಮಯ್ಯನವರು ವಿನಾಕಾರಣ ಆರೋಪಿಸುತ್ತಿದ್ದಾರೆ. ದೇಶದಲ್ಲಿ ಅಕ್ಕಿ ಸಂಗ್ರಹ ಇಳಿಮುಖ ಆಗಬಹುದು ಎನ್ನುವ ಭೀತಿಯಿಂದ ಅಕ್ಕಿ ವಿತರಣೆ ನಿಲ್ಲಿಸಲಾಗಿತ್ತು. ಇದು ಬರೀ ನಮ್ಮ ದೇಶಕ್ಕೆ ಮಾತ್ರ ಅನ್ವಯಿಸುವಂತದಲ್ಲ, ಪ್ರಪಂಚದ ಎಲ್ಲ ಕಡೆ ಈ ಆತಂಕವಿತ್ತು” ಎಂದರು.

“ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಅಕ್ಕಿಯನ್ನು ಒದಗಿಸಿದರೆ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದೂ ಸಿದ್ದರಾಮಯ್ಯನವರು ಎಲ್ಲೂ ಹೇಳಿರಲಿಲ್ಲ. ಕೇಂದ್ರದಲ್ಲಿ 330 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಕೊಡಲು ಸಿದ್ಧರಿದ್ದೇವೆ” ಎಂದು ಹೇಳಿದರು.

“ಹಿಂದೆ ಕೆಜಿಯೊಂದಕ್ಕೆ 34 ರೂಪಾಯಿ ನಿಗದಿ ಮಾಡಿದ್ದೆವು. ಈಗ ಅದನ್ನು 28 ರೂಪಾಯಿಗೆ ಇಳಿಸಿದ್ದೇವೆ. ಅಕ್ಕಿ ಕೊಡಲು ನಾವು ಸಿದ್ದರಿದ್ದೇವೆ, ಖರೀದಿಸಲು ಸಿದ್ದರಾಮಯ್ಯ ಸರ್ಕಾರದಲ್ಲಿ ದುಡ್ಡು ಇದೆಯೇ” ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments