Homeಕರ್ನಾಟಕಹೊಸ ವರ್ಷ | ರಾಜಧಾನಿಯಲ್ಲಿ ವಾಹನಗಳ ಸಂಚಾರ ನಿಲುಗಡೆಗೆ ಕೆಲವು ರಸ್ತೆಗಳಲ್ಲಿ ನಿರ್ಬಂಧ

ಹೊಸ ವರ್ಷ | ರಾಜಧಾನಿಯಲ್ಲಿ ವಾಹನಗಳ ಸಂಚಾರ ನಿಲುಗಡೆಗೆ ಕೆಲವು ರಸ್ತೆಗಳಲ್ಲಿ ನಿರ್ಬಂಧ

ಡಿ.31ರ ರಾತ್ರಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವುದರಿಂದ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ವಾಹನಗಳ ಸಂಚಾರ ನಿಲುಗಡೆಯನ್ನು ಕೆಲವು ರಸ್ತೆಗಳಲ್ಲಿ ನಿರ್ಬಂಧಿಸಲಾಗಿದೆ.

ಡಿ.31ರ ಸಂಜೆ 6 ರಿಂದ ಮುಂಜಾನೆವರೆಗೆ ನಗರದ ಕೆಲವು ರಸ್ತೆಯಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ತಿಳಿಸಿದ್ದಾರೆ.

ಸಂಚಾರ ನಿಷೇಧ

ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ, ಬ್ರಿಗೇಡ್‌ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾಜಂಕ್ಷನ್‌ ವರೆಗೆ
ಚರ್ಚ್ ಸ್ಟ್ರೀಟ್‌ರಲ್ಲಿ, ಬ್ರಿಗೇಡ್‌ ರಸ್ತೆಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆಜಂಕ್ಷನ್‌ ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ.ರಸ್ತೆಜಂಕ್ಷನ್ ನಿಂದ ಹಳೇ ಮದ್ರಾಸ್ ಬ್ಯಾಂಕ್‌ರಸ್ತೆ (ಎಸ್.ಬಿ.ಐ) ವೃತ್ತದ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

ರೆಸ್ಟ್ ಹೌಸ್‌ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆಜಂಕ್ಷ ನ್‌ನಿಂದ ಬ್ರಿಗೇಡ್‌ ರಸ್ತೆ ಜಂಕ್ಷನ್‌ವರೆಗೆ ರೆಸಿಡೆನ್ಸಿ ಕ್ರಾಸ್‌ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್‌ ನಿಂದಎಂ.ಜಿ ರಸ್ತೆಜಂಕ್ಷನ್‌ ವರೆಗೆ(ಶಂಕರ್ ನಾಗ್‌ಚಿತ್ರಮಂದಿರ)ಡಿ.31ರಿಂದ ಮರುದಿನ ಬೆಳಗಿನ ಜಾವ3 ಗಂಟೆಯ ವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ನಿಲುಗಡೆ ನಿಷೇಧ

ಎಂ.ಜಿರಸ್ತೆಯಲ್ಲಿ, ಆನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದ ವರೆಗೆ, ಬ್ರಿಗೇಡ್‌ರಸ್ತೆಯಲ್ಲಿ, ಆರ್ಟ್ಸ್ ಅಂಡ್ ಕ್ರಾಫ್ಟ್ ಜಂಕ್ಷ ನ್‌ ನಿಂದ ಅಪೇರಾ ಜಂಕ್ಷನ್‌ವರೆಗೆ ಚರ್ಚ್ ಸ್ಟ್ರೀಟ್‌ನಲ್ಲಿ, ಬ್ರಿಗೇಡ್‌ ರಸ್ತೆಜಂಕ್ಷನ್ ನಿಂದ ಸೆಂಟ್ ಮಾರ್ಕ್ಸ್ ರಸ್ತೆಜಂಕ್ಷನ್‌ವರೆಗೆ ರೆಸ್ಟ್ ಹೌಸ್‌ರಸ್ತೆಯಲ್ಲಿ, ಬ್ರಿಗೇಡ್‌ ರಸ್ತೆ ಜಂಕ್ ಷನ್‌ನಿಂದ ಮ್ಯೂಸಿಯಂ ರಸ್ತೆಜಂಕ್ಷನ್‌ ವರೆಗೆ. ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿರಸ್ತೆಜಂಕ್ಷನ್‌ನಿಂದ ಹಳೆ ಮದ್ರಾಸ್ ಬ್ಯಾಂಕ್‌ ರಸ್ತೆ(ಎಸ್.ಬಿ.ಐ) ವೃತ್ತದ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ, ರೆಸ್ಟ್ ಹೌಸ್‌ ರಸ್ತೆ, ಚರ್ಚ್ ಸ್ಟ್ರೀಟ್,ರೆಸಿಡೆನ್ಸಿ, ರಸ್ತೆಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಚಾಲಕರು ಡಿ.31 ಸಂಜೆ 4 ಗಂಟೆಯೊಳಗೆ ತೆರುವುಗೊಳಿಸುವುದು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು.

ಎಂಜಿ ರಸ್ತೆಯಲ್ಲಿ ಕ್ವಿನ್ಸ್ ರಸ್ತೆಯ ವೃತ್ತದ ಕಡೆಯಿಂದ ಹಲಸೂರು ಹಾಗು ಇನ್ನು ಮುಂದಕ್ಕೆ ಹೋಗುವಂತಹ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡತಿರುವು ಪಡೆದುಸೆಂಟ್ರಲ್ ಸ್ಟ್ರೀಟ್-ಬಿ.ಆರ್.ವಿ ಜಂಕ್ಷನ್-ಬಲ ತ ಿರುವು ಕಬ್ಬನ್‌ರಸ್ತೆ ಮೂಲಕ ಸಂಚರಿಸಿ ವೆಬ್‌ಜಂಕ್ಷನ್ ಬಳಿ ಎಂ.ಜಿರಸ್ತೆಯನ್ನುಸೇರಿ ಮುಂದೆ ಸಾಗಬಹುದಾಗಿದೆ.
ಹಲಸೂರುಕಡೆಯಿಂದಕಂಟೊನ್ನೆಂಟ್ ಕಡೆಗೆ ಹೋಗುವಂತಹ ವಾ ಹನಗಳು ಟ್ರಿನಿಟಿವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಸಂಚರಿಸಿ ಕಬ್ಬನ್‌ರಸ್ತೆ ಸೇರಿ ಮುಂದೆ ಸಾಗುವುದು.

ವಾಹನ ನಿಲುಗಡೆ

ಕಾಮರಾಜ್‌ರಸ್ತೆಯಲ್ಲಿ, ಕಬ್ಬನ್‌ರಸ್ತೆಜಂಕ್ಷನ್‌ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಶಿವಾಜಿನಗರ ಬಿ.ಎಂ.ಟಿ.ಸಿ ಶಾಪಿಂಗ್ ಕಾಂಪ್ಲೆಕ್ಸ್‌ ಒಂದನೇ ಮಹಡಿಯಲ್ಲಿ ನಿಲುಗಡೆ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments