ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ, ಅದು ಸರ್ಕಾರದ ಕೊಲೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಹಗರಣಗಳು ದೇಶಾದ್ಯಂತ ಚರ್ಚೆ ಆಗುತ್ತಿವೆ. ನಾನು ಆಂಧ್ರಪ್ರದೇಶಕ್ಕೆ ಹೋದಾಗ, ಅಲ್ಲೂ ಕೂಡ ಚರ್ಚೆ ಆಗುತ್ತಿದೆ” ಎಂದರು.
ಸಿದ್ದರಾಮಯ್ಯ ಅವರು ತಾವು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಕ್ಕೆ ಸಹಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ. 62 ಕೋಟಿ ಕೊಡಬೇಕು ಅಂತನೂ ಹೇಳಿದ್ದಾರೆ. ಅದು ಪಿತ್ರಾರ್ಜಿತ ಆಸ್ತಿನಾ? ಎಲ್ಲ ದಾಖಲೆ ಇಟ್ಟುಕೊಂಡಿದ್ದೀನಿ. ಅವರ ಪತ್ನಿ ಖರೀದಿ ಮಾಡಿದ್ದು ಸರ್ಕಾರದ ಆಸ್ತಿ. ಮುಡಾದವರು ಪಾರ್ಕ್ ,ಸೈಟ್ ಹಂಚಿಕೆ ಮಾಡಿದ ಮೇಲೆ ಖರೀದಿ ಮಾಡಿದ್ದಾರೆ” ಎಂದು ದೂರಿದರು.
“ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಸಂಬಂಧ ಮುಡಾ ನಿವೇಶನಗಳ ಹಂಚಿಕೆ ಕುರಿತ ನೀಲನಕ್ಷೆ ಬಿಡುಗಡೆ ಮಾಡಿ, ಯಾವಾಗ ವರ್ಗಾವಣೆ ಯಾವ ರೀತಿ ವ್ಯವಸ್ಥೆ ತಂದಿದ್ದೀರಾ? ನನಗೆ ಅನುಭವ ಆಗಿದೆ. ನಾನು ಇದ್ದ 14 ತಿಂಗಳು ನಾನು ಕೆಲಸ ಮಾಡೋಕೆ ಬಿಟ್ಟಿಲ್ಲ ಸಿದ್ದರಾಮಯ್ಯ” ಎಂದು ಕಿಡಿ ಕಾರಿದರು.