ಬೆಂಗಳೂರು: ಮೊಣಕಾಲಿನ ಕ್ಯಾಪ್ನೊಳಗೆ ಮರೆಮಾಚಿ ಪೇಸ್ಟ್ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯಿಂದ 47.89 ಲಕ್ಷ ರೂ ಮೌಲ್ಯದ 777.5 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಜ.31ರಂದು ಸಿಂಗಾಪುರ ಏರ್ಲೈನ್ಸ್ ಸಂಖ್ಯೆ ಎಸ್ ಕ್ಯೂ 510 ವಿಮಾನದಲ್ಲಿ ಆರೋಪಿ ಕೆಐಎಎಲ್ಗೆ ಬಂದಿಳಿದಿದ್ದನು.
ಪ್ಲಾಸ್ಕ್ನಲ್ಲಿ ಚಿನ್ನ
ಪ್ಲಾಸ್ಕ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಜ.31 ರಂದು ಪತ್ತೆ ಹಚ್ಚಿದ್ದರು. ಸೌದಿ ಅರೇಬಿಯಾದ ಜೆಡ್ಡಾ ಏರ್ಪೋರ್ಟ್ನಿಂದ ಆರೋಪಿ ಆಗಮಿಸಿದ್ದ. ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ಮಾಡಿದ್ದು, ಚಿನ್ನವನ್ನು ಪ್ಲಾಸ್ಕ್ನೊಳಗಡೆ ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿತ್ತು. 7 ಲಕ್ಷದ 52 ಸಾವಿರ ರೂ ಮೌಲ್ಯದ 122 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು.