ಕಾಂಗ್ರೆಸ್ ಜನಸಾಮಾನ್ಯರಿಗೆ ಕೊಡುವ ಭಾಗ್ಯಗಳ ಮೊತ್ತ ಕೆಲವೇ ಸಾವಿರ ಕೋಟಿ, ಬಿಜೆಪಿ ಸಿರಿವಂತರಿಗೆ ಕೊಡುವ ಬಿಟ್ಟಿ ಭಾಗ್ಯಗಳ ಮೊತ್ತ ಲಕ್ಷ ಕೋಟಿಗಳಲ್ಲಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪತ್ರಿಕೆಯೊಂದರ ವರದಿ ಹಂಚಿಕೊಂಡು ಎಕ್ಸ್‌ನಲ್ಲಿ ಕುಟುಕಿರುವ ಕಾಂಗ್ರೆಸ್, “ಸಿರಿವಂತರ ಸಾಲ ಮನ್ನಾ ಮಾಡುವುದರಿಂದ ದೇಶ ದಿವಾಳಿಯಾಗುವುದಿಲ್ಲವೇ ಬಿಜೆಪಿ” ಎಂದು ಪ್ರಶ್ನಿಸಿದೆ.
“2014ರ ಮೊದಲು ರೈಟ್ ಆಫ್ ಆಗುತ್ತಿದ್ದಿದ್ದು ಕೆಲವೇ ಸಾವಿರ ಕೋಟಿ, ಮೋದಿ ಅಧಿಕಾರಕ್ಕೆ ಬಂದನಂತರ ಅದು ಲಕ್ಷ ಕೋಟಿಗಳಿಗೇರಿದೆ. ಒಂಬತ್ತು ವರ್ಷಗಳಲ್ಲಿ ನರೇಂದ್ರ ಮೋದಿ ತಮ್ಮ ಗೆಳೆಯರಿಗೆ ಧಾರೆ ಎರೆದಿದ್ದು ಬರೋಬ್ಬರಿ 20 ಲಕ್ಷ ಕೋಟಿ! ಇದು ಬಡವರ ಬೆವರಿನ ಹಣ ಎಂಬುದನ್ನು ಬಿಜೆಪಿ ಮರೆತಿರುವಂತಿದೆ” ಎಂದು ಟೀಕಿಸಿದೆ.