Homeಕರ್ನಾಟಕನಾಡಗೀತೆ ವಿವಾದ: ಪ್ರಿಂಟ್​​ ಮಿಸ್ಟೇಕ್​ನಿಂದ ಸಮಸ್ಯೆ; ಕೂಡಲೇ ಸರಿ ಪಡಿಸುತ್ತೇವೆ: ಶಿವರಾಜ್​ ತಂಗಡಗಿ

ನಾಡಗೀತೆ ವಿವಾದ: ಪ್ರಿಂಟ್​​ ಮಿಸ್ಟೇಕ್​ನಿಂದ ಸಮಸ್ಯೆ; ಕೂಡಲೇ ಸರಿ ಪಡಿಸುತ್ತೇವೆ: ಶಿವರಾಜ್​ ತಂಗಡಗಿ

ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದ್ದು ಇಷ್ಟೆಲ್ಲಾ ವಿವಾದಕ್ಕೆ ದಾರಿಮಾಡಿಕೊಟ್ಟಿದೆ. ನಮಗೆ ಎಲ್ಲ ಶಾಲೆಗಳು ಒಂದೆ. ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ, ಅನುದಾನಿತ‌ ಶಾಲೆ, ಅಂತ ಪ್ರಿಂಟ್​​ ಮಿಸ್ಟೇಕ್​ ಆಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್​ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಇನ್ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿ, “ಅದು ಎಲ್ಲ ಶಾಲೆಗಳು ಅಂತ ತಿದ್ದುಪಡಿ ಮಾಡಿಸುತ್ತೇವೆ. ನಮ್ಮ ಸರ್ಕಾರಕ್ಕೆ ಕನ್ನಡ ಬಗ್ಗೆ ಕಾಳಜಿ ಇದೆ. ನಾವು ಬಹಳ ಸ್ಪಷ್ಟವಾಗಿ ಇದ್ದೇವೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

“ಆದೇಶ ಪ್ರತಿಯ ಸಾಧಕ-ಬಾಧಕ ಹೇಳಬೇಕು. ಸಹಜವಾಗಿ ಸುತ್ತೋಲೆ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ, ತಿದ್ದಿಕೊಳ್ಳುತ್ತೇವೆ” ಎಂದು ಹೇಳಿದರು.

ಇನ್ನು ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡ ಕಡ್ಡಾಯ ವಿಚಾರವಾಗಿ ಮಾತನಾಡಿದ ಅವರು, ಸದನದಲ್ಲಿ ಚರ್ಚೆ ಆಗಿದೆ. ಕೈಗಾರಿಗೆಗಳಿಗೂ ಹೆಸರು ಹಾಕುವ ಪದ್ಧತಿ ಬರುತ್ತಿದೆ” ಎಂದರು.

“ವಿಧಾನಸೌಧದ ಮುಂಭಾಗ ಭುವನೇಶ್ವರಿ ದೇವಿ ಪ್ರತಿಮೆ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ಚರ್ಚೆ ಆಗುತ್ತಿದೆ. ವಿಧಾನಸೌಧ ಮುಂಭಾಗದಲ್ಲಿ ಜಾಗ ಗುರುತಿಸಲಾಗಿದೆ. ಆದಷ್ಟು ಬೇಗ ಇದರ ಬಗ್ಗೆ ಮಾಹಿತಿ ಒದಗಿಸುತ್ತೇವೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments