Homeಕರ್ನಾಟಕಹಿರಿಯ ಸಾಹಿತಿ ನಾ. ಡಿಸೋಜಾಗೆ ಪಂಪ ಪ್ರಶಸ್ತಿ; ವಿವಿಧ ಪ್ರಶಸ್ತಿ ವಿವರ ಇಲ್ಲಿದೆ…

ಹಿರಿಯ ಸಾಹಿತಿ ನಾ. ಡಿಸೋಜಾಗೆ ಪಂಪ ಪ್ರಶಸ್ತಿ; ವಿವಿಧ ಪ್ರಶಸ್ತಿ ವಿವರ ಇಲ್ಲಿದೆ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ವಿವಿಧ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಹಿರಿಯ ಸಾಹಿತಿ, ಶಿವಮೊಗ್ಗದ ನಾ. ಡಿಸೋಜಾ ಅವರಿಗೆ 2023–24ನೇ ಸಾಲಿನ ಪಂಪ ಪ್ರಶಸ್ತಿ ಲಭಿಸಿದೆ.

ಇದರೋಂದಿಗೆ ಸಾಹಿತ್ಯ ಮತ್ತು ನಾಟಕ ಪ್ರಶಸ್ತಿ ವಿಭಾಗ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಇಲಾಖೆ ಪ್ರಕಟಿಸಿದ್ದು, ಪ್ರೊ. ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಮಹಾರಾಷ್ಟ್ರದ ಡಾ. ಕೆ.ವಿಶ್ವನಾಥ್ ಕಾರ್ನಾಡ (2022–23) ಮತ್ತು ಬೆಳಗಾವಿಯ ಚಂದ್ರಕಾಂತ ಪೋಕಳೆ (2023–24)ಆಯ್ಕೆ ಆಗಿದ್ದಾರೆ.

ಬಿ ವಿ ಕಾರಂತ ಪ್ರಶಸ್ತಿಗೆ ಬೆಂಗಳೂರಿನ ಸಿ.ಬಸವಲಿಂಗಯ್ಯ (2022–23), ಮಂಗಳೂರಿನ ಸದಾನಂದ ಸುವರ್ಣ (2023–24),
ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಹಾಸನದ ಬಾನು ಮುಷ್ತಾಕ್ (2022–23) ಮತ್ತು ರಾಯಚೂರಿನ ಎಚ್‌.ಎಸ್.ಮುಕ್ತಾಯಕ್ಕ (2023–24),ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ತುಮಕೂರಿನ ಚನ್ನಬಸಯ್ಯ ಗುಬ್ಬಿ (2022-23), ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ (2023–24), ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಹಂಪಿ ಡಾ. ಮೊಗಳ್ಳಿ ಗಣೇಶ್ (2021–22), ಉತ್ತಮ ಕಾಂಬ್ಳೆ (2022–23), ದಾವಣಗೆರೆಯ ಬಿ.ಟಿ.ಜಾಹ್ನವಿ (2023–24) ಆಯ್ಕೆ ಆಗಿದ್ದಾರೆ.

ಈ ಪ್ರಶಸ್ತಿಗಳು ತಲಾ ₹5 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ಡಾ. ಬರಗೂರು ರಾಮಚಂದ್ರಪ್ಪ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

ಸಂಗೀತ, ನೃತ್ಯ ಪ್ರಶಸ್ತಿ ವಿಭಾಗ

ನಿಜಗುಣ–ಪುರಂದರ ಪ್ರಶಸ್ತಿಗೆ ಮೈಸೂರಿನ ಎಂ.ಕೆ.ಸರಸ್ವತಿ (2022–23), ಧಾರವಾಡದ ಅಕ್ಕಮಹಾದೇವಿ ಮಠ (2023–24), ಕುಮಾರವ್ಯಾಸ ಪ್ರಶಸ್ತಿಗೆ ಗದುಗಿನ ಸಿದ್ದೇಶ್ವರ ಶಾಸ್ತ್ರಿ (2022–23), ಮೈಸೂರಿನ ಕೃಷ್ಣಗಿರಿ ರಾಮಚಂದ್ರ (2023–24), ಶಾಂತಲಾ ನಾಟ್ಯ ಪ್ರಶಸ್ತಿಗೆ ಬೆಂಗಳೂರಿನ ಚಿತ್ರಾ ವೇಣುಗೋಪಾಲ್ (2022–23), ಬೆಂಗಳೂರಿನ ರೇವತಿ ನರಸಿಂಹನ್‌ (2023–24), ಸಂತ ಶಿಶುನಾಳ ಷರೀಫ್ ಪ್ರಶಸ್ತಿಗೆ ಬೆಂಗಳೂರಿನ ಕಸ್ತೂರಿ ರಂಗನ್‌ (2022–23), ಶಿವಮೊಗ್ಗದ ಎನ್.ಬಿ.ಶಿವಲಿಂಗಪ್ಪ (2023–24)ಆಯ್ಕೆ ಆಗಿದ್ದಾರೆ.

ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಾ. ನರಸಿಂಹಲು ವಡವಾಡಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗ

ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಬೆಂಗಳೂರಿನ ಕೆ. ಮರುಳಸಿದ್ದಪ್ಪ (2020–21), ಬೆಳಗಾವಿಯ ಹಸನ್‌ ನಯೀಂ ಸುರಕೋಡ (2021–22), ಕೋಲಾರದ ಕೆ. ರಾಮಯ್ಯ (2022–23), ಬಳ್ಳಾರಿಯ ವೀರಸಂಗಯ್ಯ (2023–24), ಅಕ್ಕಮಹಾದೇವಿ ಪ್ರಶಸ್ತಿಗೆ ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (2020–21), ಮಂಡ್ಯದ ಡಾ. ಆರ್.ಸುನಂದಮ್ಮ (2021–22), ಕಲಬುರಗಿಯ ಮೀನಾಕ್ಷಿ ಬಾಳಿ (2022–23), ಬೆಂಗಳೂರಿನ ಡಾ. ವಸುಂಧರಾ ಭೂಪತಿ (2023–24), ಕನಕಶ್ರೀ ಪ್ರಶಸ್ತಿಗೆ ಹಾವೇರಿಯ ಡಾ. ಲಿಂಗದಹಳ್ಳಿ ಹಾಲಪ್ಪ (2021–22), ಮಂಗಳೂರಿನ ಡಾ. ಬಿ.ಶವರಾಮ ಶೆಟ್ಟಿ (2022–23) ಆಯ್ಕೆ ಅಗಿದ್ದಾರೆ.

ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬಿ.ಟಿ.ಲಲಿತಾ ನಾಯಕ್ ಅವರು ಈ ಪ್ರಶಸ್ತಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

ಕಲಾ ಪ್ರಶಸ್ತಿ ವಿಭಾಗ

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಮೈಸೂರಿನ ಜಿ.ಎಲ್.ಎನ್.ಸಿಂಹ (2022–23), ಕಲಬುರಗಿಯ ಬಸವರಾಜ್ ಎಲ್. ಜಾನೆ (2023–24), ಜಾನಪದಶ್ರೀ ಪ್ರಶಸ್ತಿ- ವಾದನ: ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (2022–23), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (2023–24) ಜಾನದಪಶ್ರೀ ಪ್ರಶಸ್ತಿ– ಗಾಯನ: ಬೀದರ್‌ನ ಕಲ್ಲಪ್ಪ ಮಿರ್ಜಾಪುರ (2022–23), ಚಿತ್ರದುರ್ಗದ ಹಲಗೆ ದುರ್ಗಮ್ಮ (2023–24) ಆಯ್ಕೆ ಆಗಿದ್ದಾರೆ.

ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಾ. ವಿ.ಟಿ.ಕಾಳೆ ಅವರು ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments