Homeಕರ್ನಾಟಕಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಹಠಾತ್ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ

ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಹಠಾತ್ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ

ರಾಜ್ಯದ ಆಂತರಿಕ ಭದ್ರತೆ ವಿಭಾಗದ ಪೊಲೀಸ್ ಮಹಾ‌ನಿರ್ದೇಶಕ (ಡಿಜಿಪಿ)ಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಹಠಾತ್ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬರುವ ಮೇ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದ ಡಿಜಿಪಿ ಪ್ರತಾಪ್​ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ವೈಯಕ್ತಿಕ ಕಾರಣವನ್ನು ನೀಡಿ ಸ್ವಯಂ ನಿವೃತ್ತಿ ಕೋರಿ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೂಲಗಳ ಪ್ರಕಾರ ರಾಜ್ಯ ಪೊಲೀಸ್ ಮಹಾ‌ನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್ ಅವರು ಮೆಮೋ ನೀಡಿದರೆನ್ನುವ ಕಾರಣಕ್ಕೆ ಸ್ವಯಂ ನಿವೃತ್ತಿ ಕೋರಿದ್ದಾರೆ ಏಕೆಂದರೆ ತಮ್ಮದೇ ರ‍್ಯಾಂಕ್ ಅಧಿಕಾರಿ ಮೆಮೋ ಬಹುತೇಕ ಅಧಿಕಾರಿಗಳು ಇಷ್ಟಪಡುವುದಿಲ್ಲ.

ಅಲೋಕ್ ಮೋಹನ್ ಹಾಗೂ ಪ್ರತಾಪ್ ರೆಡ್ಡಿ ಇಬ್ಬರು ಡಿಜಿಪಿಗಳಾಗಿದ್ದು ಮೆಮೋ ‌ನೀಡಿದ್ದರಿಂದ ಬೇಸರಗೊಂಡು ಪ್ರತಾಪ್ ರೆಡ್ಡಿ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಾಪ್ ರೆಡ್ಡಿ ಅವರು ಈಗಿನ ಪೊಲೀಸ್ ಕಮೀಷನರ್ ದಯಾನಂದ್ ಅವರ ಹಿಂದೆ ನಗರ ಪೊಲೀಸ್ ಆಯುಕ್ತರಾಗಿ‌ಯೂ ಸೇವೆ ಸಲ್ಲಿಸಿದರು. ಹಿರಿಯ ಐಪಿಎಸ್​ ಅಧಿಕಾರಿ ಸಿ. ಹೆಚ್​ ಪ್ರತಾಪ್​ ರೆಡ್ಡಿ ಅವರು ಜು. 01 1964ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಸಿದರು.

ಪ್ರತಾಪ್​ ರೆಡ್ಡಿ ಬಿ.ಟೆಕ್​ ಪದವೀಧರರು. ಇವರು 1991ರಲ್ಲಿ ಕರ್ನಾಟಕ ಕೆಡರ್​ನ ಐಪಿಎಸ್​ ಅಧಿಕಾರಿಯಾಗಿ ಕಾರ್ಯವನ್ನು ಆರಂಭಿಸಿದರು. ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿ ಸಹಾಯಕ ಸೂಪರಿಟೆಂಡೆಂಟ್​ ಆಗಿ ಪ್ರತಾಪ್​ ರೆಡ್ಡಿ ಅವರು ಕೆಲಸ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ, ಸಿಐಡಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದಾರೆ.

ಪ್ರತಾಪ್​ ರೆಡ್ಡಿ ಅವರು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಂಬೈ ಮತ್ತು ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್​ ಮತ್ತು ಸೈಬರ್​ ಸೆಕ್ಯುರಿಟಿ ವಿಭಾಗದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಪ್ರತಾಪ್​ ರೆಡ್ಡಿ ಅವರನ್ನು ಕಮಲ್​ ಪಂತ ಅವರ ಬಳಿಕ ನಗರ ಪೊಲೀಸ್​ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ರಾಜ್ಯದ ಕೂಲ್​ ಐಪಿಎಸ್​ ಅಧಿಕಾರಿಗಳಲ್ಲಿ ಪ್ರತಾಪ್​ ರೆಡ್ಡಿ ಅವರು ಸಹ ಒಬ್ಬರು. ಪ್ರತಾಪ್​ ರೆಡ್ಡಿ ಅವರು ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments