Homeಕರ್ನಾಟಕದರ್ಶನ್‌, ಪ್ರಜ್ವಲ್‌, ಸೂರಜ್‌, ಯಡಿಯೂರಪ್ಪ ವಿರುದ್ಧ ರಮ್ಯಾ ಕಿಡಿ

ದರ್ಶನ್‌, ಪ್ರಜ್ವಲ್‌, ಸೂರಜ್‌, ಯಡಿಯೂರಪ್ಪ ವಿರುದ್ಧ ರಮ್ಯಾ ಕಿಡಿ

ಲೈಂಗಿಕ ದೌರ್ಜನ್ಯ, ಕೊಲೆ ಆರೋಪ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಹೊತ್ತಲ್ಲಿ ಕೆಲವು ಪ್ರಕರಣ ಉಲ್ಲೇಖಿಸಿ ನಟಿ ರಮ್ಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಟ ದರ್ಶನ್‌, ಪ್ರಜ್ವಲ್‌ ರೇವಣ್ಣ, ಬಿಜಿಪಿ ನಾಯಕ ಬಿ ಎಸ್‌ ಯಡಿಯೂರಪ್ಪ ಹಾಗೂ ಸೂರಜ್‌ ರೇವಣ್ಣ ಅವರನ್ನು ವಿರುದ್ಧ ನಟಿ ರಮ್ಯಾ ತೀವ್ರ ಬೇಸರ ಹೊರಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಸದ್ಯ ಸುದ್ದಿಯಲ್ಲಿರುವವರು ಕಾನೂನು ಉಲ್ಲಂಘಿಸಿರುವ ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಇವರ ಹಿಂಸಾತ್ಮಕ ಕೃತ್ಯಗಳಿಂದಾಗಿ ಬಡವರು, ಮಹಿಳೆಯರು ಮತ್ತು ಮಕ್ಕಳ ಬಾಳು ಹಾಳಾಗಿದೆ. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಅಭಿನಂದನೆಗಳು. ವಿಚಾರಣೆ ತ್ವರಿತಗೊಳಿಸಿ ಪ್ರಕರಣ ತಾರ್ತಿಕ ಅಂತ್ಯ ಕಂಡಾಗ ನಿಜವಾದ ನ್ಯಾಯ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ?” ಎಂದು ಪ್ರಶ್ನಿಸಿದ್ದಾರೆ.

ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ ರಮ್ಯಾ, ‘ಆತನಿಗೆ (ದರ್ಶನ್‌) ಸಿಕ್ಕಿರುವ ಜನಪ್ರಿಯತೆ ನೆತ್ತಿಗೇರಿದೆ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಹಿಂದೆಯೂ ಅವರು ತಪ್ಪು ಮಾಡಿದ್ದರು. ಆದರೆ, ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಬಿಂಬಿಸಲಾಗಿದೆ. ಪೊಲೀಸ್ ಠಾಣೆ ಮುಂದೆ ಜನ ನಿಂತ ಮಾತ್ರಕ್ಕೆ ಆತ ಅಷ್ಟು ಪ್ರಭಾವ ಹೊಂದಿದ್ದಾನೆ ಎನ್ನಲಾಗುವುದಿಲ್ಲ” ಎಂದು ನೇರವಾಗಿ ಹರಿಹಾಯ್ದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments