Homeಕರ್ನಾಟಕಶಿಸ್ತಿನ ಸಿಪಾಯಿ ಸಚಿವ ಖರ್ಗೆ

ಶಿಸ್ತಿನ ಸಿಪಾಯಿ ಸಚಿವ ಖರ್ಗೆ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಆಡಳಿತವನ್ನು ರಾಜ್ಯದ ಜನತೆ ನೆನಪಿಸಿಕೊಳ್ಳವಂತಹ ಆಡಳಿತಕ್ಕೆ ಸಜ್ಜಾಗುತ್ತಿದ್ದಾರೆ. ತಮ್ಮ ಇಲಾಖೆಯ ಕಾರ್ಯಗಳಲ್ಲಿ ಅತ್ಯಂತ ಶಿಸ್ತು ಪಾಲಿಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಆ ಮೂಲಕವೇ ಮಾದರಿ ಸಚಿವರು ಎಂಬ ಖ್ಯಾತಿ ಪಡೆದವರು. ಈಗ ಅದೇ ಹಾದಿಯಲ್ಲಿ ಅವರ ಪುತ್ರ ಸಾಗುತ್ತಿದ್ದಾರೆ.
ತಾವು ಸಚಿವರಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ತುಂಬಿದ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರು ೨೯ ಮೇ ೨೦೨೩ – ೨೯ ಜೂನ್ ೨೦೨೩ ಅವಧಿಯ ತಮ್ಮ ಮೊದಲ ತಿಂಗಳ ಕಾರ್ಯಪಾಲನ ವರದಿಯನ್ನು (ವರ್ಕ್ ರಿಪೋರ್ಟ್) ಸಾರ್ವಜನಿಕರ ಮುಂದಿಡುವ ಮೂಲಕ ತಮ್ಮ ತಂದೆಯ ಹಾದಿಯಲ್ಲಿ ಸಾಗಿದ್ದಾರೆ.


ಒಂದು ತಿಂಗಳ ಅವಧಿಯಲ್ಲಿ ಸರ್ಕಾರಿ ಮಟ್ಟದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಯ ಸಚಿವರೊಂದಿಗೆ ೮ ಸಭೆಗಳಲ್ಲಿ ಪಾಲ್ಗೊಂಡಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟ ೧೪ ಸಭೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ ೨೧ ಸಭೆಗಳನ್ನು ಸಚಿವರು ಯಶಸ್ವಿಯಾಗಿ ನಿರ್ವಹಿಸಿದ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಮೇಲ್ಪಂಕ್ತಿ ಹಾಕಿದ್ದಾರೆ.


ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೂ ಈ ಅವಧಿಯಲ್ಲಿ ೩ ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಎರಡು ಬಾರಿ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡು ತಮ್ಮ ಮತಕ್ಷೇತ್ರ ಚಿತ್ತಾಪುರಕ್ಕೂ ತೆರಳಿ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಬಂದಿದ್ದಾರೆ.
ಈ ಅವಧಿಯಲ್ಲಿ ಸಚಿವರು ೧೨ ಮಾಧ್ಯಮ ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಸಾರ್ವಜನಿಕರು ಪ್ರತಿನಿತ್ಯ ಕಚೇರಿ ಹಾಗೂ ಗೃಹ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಪ್ರತಿ ನಿತ್ಯ ೫೦೦೦ಕ್ಕೂ ಹೆಚ್ಚು ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರಿಂದ ಸಚಿವರು ಮನವಿಗಳನ್ನು ಸ್ವೀಕರಿಸಿ, ಕೆಲವರೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ. ಹೀಗೆ ಸ್ವೀಕರಿಸುತ್ತಿರುವ ಮನವಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುವ ಪ್ರಕ್ರಿಯೆ ನಡೆಯುತ್ತಿದೆ.

ಪ್ರಮುಖ ನಿರ್ಧಾರಗಳು :

  • ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯತಿ ಸದಸ್ಯರೊಂದಿಗೆ ಕಡ್ಡಾಯ ಸಭೆ ನಡೆಸಲು ಸೂಚನೆ.
  • ನವೆಂಬರ್ ತಿಂಗಳಿನಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ ಆಯೋಜಿಸಲು ಪೂರ್ವ ತಯಾರಿ ಹಾಗೂ ದಿನಾಂಕ ಘೋಷಣೆ.
  • ಪಂಚಾಯತ್ ರಾಜ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಹಾಗೂ ಇಲಾಖಾ ಅಧಿಕಾರಿಗಳನ್ನು ಮತ್ತಷ್ಟು ಉತ್ತರದಾಯಿಯನ್ನಾಗಿಸಲು ಪಂಚತಂತ್ರ – ೨ ಜಾರಿಗೆ ಸಕಲ ಸಿದ್ಧತೆ.
  • ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಯಮಿತ ಹಾಗೂ ಜಲ ಜೀವನ ಮಿಷನ್ ಮೂಲಕ ನಡೆದ ಎಲ್ಲಾ ಕಾಮಗಾರಿಗಳ ಪ್ರತ್ಯೇಕ ಥರ್ಡ್ ಪಾರ್ಟಿ ಪರಿಶೀಲನೆ, ಕೆಲಸಕ್ಕೆ ಹಸಿರು ನಿಶಾನೆ, ಹಲವು ಭ್ರಷ್ಟ ಅಧಿಕಾರಗಳ ಅಮಾನತು.
  • ಕಿಯೋನಿಕ್ಸ್ ಸಂಸ್ಥೆಯನ್ನು ಉದ್ದೇಶ ಆಧಾರಿತ ಪುನಶ್ಚೇತನಕ್ಕೆ ಸಜ್ಜುಗೊಳಿಸುವುದು ಹಾಗೂ ಸಂಸ್ಥೆಯ ಅಧಿಕೃತ ಪಟ್ಟಿಯಲ್ಲಿರುವ ಎಲ್ಲಾ ಖಾಸಗಿ ಸರಬರಾಜು ಹಾಗೂ ಸೇವಾದಾರರ ಸಮಗ್ರ ಪರಿಷ್ಕರಣೆಗೆ ಸೂಚನೆ.
  • ಸ್ಟಾರ್ಟ್ ಅಪ್‌ಗಳಿಗೆ ವಿಶೇಷ ಉತ್ತೇಜನ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಲು ಕರ್ನಾಟಕ ಕೌಶಲ್ಯ ಸಲಹಾ ಸಮಿತಿ ಸ್ಥಾಪನೆಗೆ ಕ್ರಮ.
  • ಮುಂದಿನ ಎರಡು ತಿಂಗಳಲ್ಲಿ ಎದುರಾಗಬಲ್ಲ ಕುಡಿಯುವ ನೀರಿನ ಸಮಸ್ಯೆಗೆ ಪೂರ್ವಭಾವಿಯಾಗಿ ಕಂಟಿನ್ಜೆನ್ಸಿ ಯೋಜನೆಗೆ ಕ್ರಮ.
  • ಕಲಬುರಗಿಯಲ್ಲಿ ಪೊಲೀಸ್ ಸೇವೆಯನ್ನು ಜನಸ್ನೇಹಿಯಾಗಿಸುವುದಕ್ಕೆ ಆಪ್ ಮೂಲಕ ಫೀಡ್ ಬ್ಯಾಕ್ ಪಡೆಯಲು ಕ್ರಮ.
  • ತಂತ್ರಜ್ಞಾನ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಕೌಶಲ್ಯಪೂರ್ಣವಾಗಿಸಲು ವಿಶೇಷ ಕಾರ್ಯಕ್ರಮ ರೂಪಿಸಲು ಕ್ರಮ.
  • ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಅಭಿವೃದ್ಧಿಪಡಿಸುವ ಸ್ಟಾರ್ಟ್ ಅಪ್‌ಗಳಿಗೆ ವಿಶೇಷ ಪ್ರೋತ್ಸಾಹಕ್ಕೆ ಕ್ರಮ.
  • ಸ್ಟಾರ್ಟಪ್ ರಾಜಧಾನಿಯಾಗಿರುವಂತೆ ಬೆಂಗಳೂರನ್ನು ಡಿಜಿಟಲ್ ಆರ್ಥಿಕತೆಯ ರಾಜಧಾನಿಯಾಗಿಸಲು ರೂಪುರೇಷೆ ರಚನೆಗೆ ಕ್ರಮ.
  • ರಾಜ್ಯದ ಸಮಗ್ರ ಕುಡಿಯುವ ನೀರಿನ ಮೂಲಗಳ ಆಡಿಟ್‌ಗೆ ಕ್ರಮ – ಈ ಮೂಲಕ ರಾಜ್ಯಾದ್ಯಂತ ಇರುವ ಪ್ರತಿಯೊಂದು ಕುಡಿಯುವ ನೀರಿನ ಮೂಲವನ್ನು ಪತ್ತೆ ಹೆಚ್ಚಿ ಅದನ್ನು ಸದ್ಬಳಕೆ ಮಾಡಲು ಸಿದ್ಧತೆ.
  • ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಘಟಕಗಳ ಸ್ಥಾಪನೆಗೆ ಕ್ರಮ. ತ್ಯಾಜ್ಯ ಪುನರ್ಬಳಕೆ ಮೂಲಕ ಪಂಚಾಯಿತಿಗಳು ಆದಾಯ ಗಳಿಸುವ ರೀತಿಯಲ್ಲಿ ರೂಪುರೇಷೆ ರಚನೆ.
  • ರಾಜ್ಯಾದ್ಯಂತ ಇರುವ ಎಲ್ಲಾ ಗ್ರಾಮೀಣ ರಸ್ತೆಗಳನ್ನು ವೈಜ್ಞಾನಿಕವಾಗಿ ಮೇಲ್ದರ್ಜೆಗೇರಿಸಿ, ಮರುಬಳಕೆಯ ಪ್ಲಾಸ್ಟಿಕ್ ಬಳಸಿ ಉನ್ನತೀಕರಣಗೊಳಿಸಲು ಕ್ರಮ
  • ರಾಜ್ಯಾದ್ಯಂತ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕದ (ಖಔ ಪ್ಲಾಂಟ್) ಕಾಮಗಾರಿಗಳ ಮರುಪರಿಶೀಲನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments