Homeಕರ್ನಾಟಕರಾಷ್ಟ್ರೀಯ ಐಕ್ಯತಾ ಸಮಾವೇಶ | ಫೆ.24, 25ರಂದು ಆಯೋಜನೆ, ಲಾಂಛನ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ರಾಷ್ಟ್ರೀಯ ಐಕ್ಯತಾ ಸಮಾವೇಶ | ಫೆ.24, 25ರಂದು ಆಯೋಜನೆ, ಲಾಂಛನ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಫೆ.24, 25ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಭಾರತ ಸಂವಿಧಾನ ಹಾಗೂ ಐಕ್ಯತಾ ಸಮಾವೇಶ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು,”ಭಾರತದ ಸಂವಿಧಾನ ಜಾರಿಗೆ ಬಂದು 75 ವರ್ಷಕ್ಕೆ ಕಾಲಿಟ್ಟಿದೆ. ಅಮೃತ ಉತ್ಸವದ ಕಾರ್ಯಕ್ರಮವನ್ನ ಅರ್ಥಪೂರ್ಣವಾಗಿ ಆಚರಿಸಬೇಕೆಂದು ತೀರ್ಮಾನ ಮಾಡಿದ್ದೇವೆ” ಎಂದರು.

“ಪ್ರೊ, ಅಶುತೋಷ್, ಪ್ರಶಾಂತ್ ಭೂಷಣ್, ಮೇದಾ ಪಾಟ್ಕರ್ ಸೇರಿದಂತೆ ಅನೇಕ ಮೇದಾವಿಗಳು ಭಾಗವಹಿಸುತ್ತಾರೆ” ಎಂದು ತಿಳಿಸಿದರು.

“ಫೆ.24ರಂದು ಸಮಾವೇಶ ಉದ್ಘಾಟನೆ ಆಗಲಿದೆ. ಫೆ.25ರಂದು ಸಮಾರತೋಪ ನಡೆಯಲಿದೆ. ಭಾರತದ ಸಂವಿಧಾನ ಜಾರಿಯಾಗಿ 75 ವರ್ಷ ಆಗಿದೆ. ಜನವರಿ 26ರಿಂದ 31 ಜಿಲ್ಲೆಗಳಲ್ಲೂ ಸಂವಿಧಾನ ಜಾಥಾ ಕಾರ್ಯಕ್ರಮ ನಡೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕೆಲಸ ಆಗುತ್ತಿದೆ” ಎಂದು ಹೇಳಿದರು.

“31 ಜಿಲ್ಲೆಗಳಲ್ಲಿ ಸಂವಿಧಾನ ಜಾಥಾ ಮಾಡುವ ಕಾರ್ಯಕ್ರಮವನ್ನು ಜನವರಿ 26 ರಿಂದ ಹಮ್ಮಿಕೊಳ್ಳಲಾಗಿದೆ. ಫೆ. 25ರಂದು ಇದು ಕೊನೆಯಾಗುತ್ತದೆ” ಎಂದರು.

“ಸ್ವಾತಂತ್ರ್ಯ ಬಂದು 77 ವರ್ಷ ಆಗಿದೆ. ಸಂವಿಧಾನ ಜಾರಿಯಾಗಿ 75 ವರ್ಷ ಆದ್ರೂ ಎಲ್ಲರಿಗೂ ಸಮಾನತೆ ಸಿಕ್ಕಿಲ್ಲ. ಸಂವಿಧಾನಕ್ಕೆ ದಕ್ಕೆ ತರುವ ಕೆಲಸ ಮಾಡಿದರೆ ಅದನ್ನು ವಿಫಲ ಮಾಡಲೇಬೇಕು. ಇದಕ್ಕೆ ಯಾವುದೇ ಪಕ್ಷ, ವ್ಯಕ್ತಿ ಅಂತಾ ಇಲ್ಲ” ಎಂದುಸಿದ್ದರಾಮಯ್ಯ ಹೇಳಿದರು.

ರಾಷ್ಟ್ರೀಯ ಐಕ್ಯತಾ ಸಮಾವೇಶದ ಲಾಂಛನವನ್ನು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸಚಿವ ಎಚ್‌ ಸಿ ಮದೇವಪ್ಪ ಸೇರಿದಂತೆ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments