Homeಕರ್ನಾಟಕಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲಿಪಶು ಮಾಡಲು ಇಂಡಿಯಾ ಕೂಟದ ನಾಯಕನನ್ನಾಗಿ ಮಾಡಲಾಗುತ್ತಿದೆ: ಪ್ರಲ್ಹಾದ್‌ ಜೋಶಿ

ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲಿಪಶು ಮಾಡಲು ಇಂಡಿಯಾ ಕೂಟದ ನಾಯಕನನ್ನಾಗಿ ಮಾಡಲಾಗುತ್ತಿದೆ: ಪ್ರಲ್ಹಾದ್‌ ಜೋಶಿ

ಇಂಡಿಯಾ ಕೂಟದ ಅಸ್ತಿತ್ವ ಎಲ್ಲಿದೆ, ತೋರಿಕೆಗೆ ಅಷ್ಟೇ ಇದೊಂದು ಘಟಬಂಧನ್. ಮಹಾರಾಷ್ಟ, ಉತ್ತರಪ್ರದೇಶ​, ಪಶ್ಚಿಮ ಬಂಗಾಳಗದಲ್ಲಿ ಜಗಳ ಆಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಲೋಕಸಭೆ ಚುನಾವಣೆಯಲ್ಲಿ ಸೋತರೇ ಗಾಂಧಿ ಕುಟುಂಬದ ಮೇಲೆ ಆ ಅಪವಾದ ಬರಬಾರದು, ಎಂದು ಬಲಿಪಶು ಮಾಡಲೆಂದೇ ​ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಕೂಟದ ನಾಯಕನನ್ನಾಗಿ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

“ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವಿದೆ. ಕಮ್ಯುನಿಸ್ಟ್ ಸರ್ಕಾರ ನಮ್ಮ ಮೇಲೆ ಅತ್ಯಾಚಾರ ಮಾಡುತ್ತಿದೆ, ನಮ್ಮ ಕಾರ್ಯಕರ್ತರನ್ನ ಹೊಡಿಯುತ್ತಿದ್ದಾರೆ ಅಂತ ಅಲ್ಲಿನ ಕಾರ್ಯಕರ್ತರು ಹೇಳುತ್ತಿದ್ದಾರೆ. ನಿಮ್ಮಲ್ಲೇ ಹೊಂದಾಣಿಕೆ ಇಲ್ಲ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಕ್ಕೂಟದಿಂದ ಹೊರ ಬರುವ ವಿಚಾರ ಮಾಡುತ್ತಿದ್ದಾರೆ. ಇಂಡಿಯಾ ಕೂಡದಲ್ಲಿ ಎಲ್ಲವೂ ಸರಿಯಿಲ್ಲ” ಎಂದರು.

“ಕಾಂಗ್ರೆಸ್​ನವರು ಅಸಹಾಯಕ ಸ್ಥಿತಿಗೆ ಬಂದಿದ್ದಾರೆ. ಅವರು ಸೋಲುವುದು ಗ್ಯಾರೆಂಟಿ, ಜಗ್ಗೇಶ್ ಬಾಷೆಯಲ್ಲಿ ಹೇಳೋದಾದರೆ ಢಮಾರ್ ಆಗೋದು ಗ್ಯಾರಂಟಿ. ಅದಕ್ಕೆ ಮಲ್ಲಿಕಾರ್ಜುನ್​ ಖರ್ಗೆಯವರನ್ನು ಬಲಿ ಕೊಡುತ್ತಿದ್ದಾರೆ” ಎಂದು ಹೇಳಿದರು.

ಭಾರತ ನ್ಯಾಯ ಯಾತ್ರೆಗೆ ಬಿಜೆಪಿ ಸರ್ಕಾರದ ರಾಜ್ಯಗಳು ಅನುಮತಿ ನೀಡದ ಆರೋಪ ವಿಚಾರವಾಗಿ ಮಾತನಾಡಿದ ಅವರು, “ಮಣಿಪುರ ಸರ್ಕಾರ ಅನುಮತಿ ಕೊಟ್ಟಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಉತ್ತರ ಕೊಟ್ಟಿದ್ದೆ. ರಾಹುಲ್ ಗಾಂಧಿ ಪ್ರಚಾರ ಮಾಡದೇ ಇರುವುದು ದುರ್ದೈವ ಅಂದಿದ್ದೆ. ಅವರು ಹೆಚ್ಚು ಅಡ್ಡಾಡಿದಷ್ಟು ಒಳ್ಳೆಯದು. ಎಲ್ಲೆಲ್ಲಿ ಹೋಗುತ್ತಾರೆ? ಅವರು ಏನು ಅಂತಾ ಜನ ನೋಡುತ್ತಾರೆ. ಅವರಿಗೆ ಎಲ್ಲಾ ವ್ಯವಸ್ಥೆಯನ್ನು ನಾವು ಮಾಡುತ್ತೇವೆ” ಎಂದರು.

“ಜಗದೀಶ್ ಶೆಟ್ಟರ್ ಘರ್ ವಾಪಸಿ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡಿಲ್ಲ, ನನಗೆ ಅದು ಸಂಬಂಧವಿಲ್ಲ. ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ರಾಮಮಂದಿರಕ್ಕೆ ಎಲ್ಲರಿಗೂ ಆಹ್ವಾನ ಇತ್ತು, ಸಹಜವಾಗಿ ಬಂದಿದ್ದರೇ ಚರ್ಚೆ ಆಗುತ್ತಿರಲಿಲ್ಲ. ಎಲ್ಲಿ ವೋಟ್​ ಸಿಗುತ್ತೆ ಅಲ್ಲಿಗೆ ಹೋಗುವ ವಿಚಾರ ಕಾಂಗ್ರೆಸ್​ನದ್ದು” ಎಂದು ಕಿಡಿಕಾರಿದರು.

ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿದ ಅವರು, “ಸರ್ಕಾರದ ತುಷ್ಟೀಕರಣ ರಾಜಕಾರಣ ಸ್ಪಷ್ಟವಾಗಿ ಎದ್ದುಕಾಣುತ್ತಿದೆ. ಸರ್ಕಾರ ಯಾರನ್ನೋ ರಕ್ಷಿಸಲು ಹೊರಟಿದೆ ಅನ್ನೋದು ಕಾಣುತ್ತಿದೆ. ದಕ್ಷ ಅಧಿಕಾರಿಗಳನ್ನು ನೇಮಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನ್ಯಜಾತಿಯವರು ಮಾಡಿದ್ದರೆ ಇದು ದೊಡ್ಡದಾಗುತ್ತಿತ್ತು” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments