Homeಕರ್ನಾಟಕಆರು ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; 35 ಸ್ಥಳಗಳಲ್ಲಿ ಶೋಧ, ಕೋಟಿ ಕೋಟಿ ಸಂಪತ್ತು...

ಆರು ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; 35 ಸ್ಥಳಗಳಲ್ಲಿ ಶೋಧ, ಕೋಟಿ ಕೋಟಿ ಸಂಪತ್ತು ವಶ

ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಆರು ಭ್ರಷ್ಟ ಅಧಿಕಾರಿಗಳ ಮೇಲೆ 35 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಶೋಧನಾ ಸಮಯದಲ್ಲಿ ಸಿಕ್ಕ ಅಕ್ರಮ ಆಸ್ತಿ ವಿವರವನ್ನು ಪತ್ರಿಕಾ ಪ್ರಕಟಣೆ ಮೂಲಕ ಲೋಕಾಯುಕ್ತ ಕಚೇರಿ ಹಂಚಿಕೊಂಡಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 06 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಆರು ಪ್ರಕರಣಗಳು ದಾಖಲಾಗಿದ್ದವು.

ಅಧಿಕಾರಿ ಎಂ ಎಲ್ ನಾಗರಾಜ್

ಬೆಸ್ಕಾಂನ ಚೀಫ್ ಜನರಲ್ ಮ್ಯಾನೇಜರ್ ಎಂ ಎಲ್ ನಾಗರಾಜ್ ಅವರ ಮೇಲೆ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು ಏಳು ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದ್ದು, ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 13 ನಿವೇಶನಗಳು, 2 ವಾಸದ ಮನೆಗಳು, ಕೃಷಿ ಜಮೀನು- ಎಲ್ಲಾ ಸೇರಿ ಒಟ್ಟು ಮೌಲ್ಯ 5.35 ಕೋಟಿ ರೂ. ಆಗಿದೆ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 6,77,200 ನಗದು, 16,44,000 ರೂ. ಬೆಲೆ ಬಾಳುವ ಚಿನ್ನಾಭರಣಗಳು, 13,50,000 ರೂ. ಬೆಲೆ ಬಾಳುವ ವಾಹನಗಳು, 11,19,206 ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 63, 66, 804 ರೂ ಆಗಿದೆ. ಇವರ ಒಟ್ಟು ಆಸ್ತಿ ಮೌಲ್ಯ 6,37,12,926 ಆಗಿದೆ.

ಅಧಿಕಾರಿ ಡಿ ಎಮ್ ಪದ್ಮನಾಭ

ಡಿ ಎಮ್ ಪದ್ಮನಾಭ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಜಿಲ್ಲೆ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ಕೈಗಾರಿಕಾ ನಿವೇಶನ, 2 ವಾಸದ ಮನೆಗಳು. 8-18 ಎಕರೆ ಕೃಷಿ ಜಮೀನು ಮತ್ತು ಒಂದು ಫಾರ್ಮ್ ಹೌಸ್, ಎಲ್ಲಾ ಸೇರಿ ಒಟ್ಟು ಮೌಲ್ಯ 5.35 ಕೋಟಿ ರೂ. ಆಗಿದೆ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ ರೂ. 2,62,500 ನಗದು, ರೂ.17,24,304 ಬೆಲೆಬಾಳುವ ಚಿನ್ನಾಭರಣಗಳು, ರೂ.28,75,000 ಬೆಲೆಬಾಳುವ ವಾಹನಗಳು ಮತ್ತು ರೂ. 15,00,000 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 63,66,804. ಸ್ಥಿರ ಮತ್ತು ಚರ ಆಸ್ತಿಯ ಒಟ್ಟು ಮೌಲ್ಯ 5,98,66,804 ಆಗಿದೆ.

ಅಧಿಕಾರಿ ಎನ್ ಸತೀಶ್ ಬಾಬು

ಎನ್ ಸತೀಶ್ ಬಾಬು, ಅಧೀಕ್ಷಕ ಅಭಿಯಂತರರು, ಬಿಲ್ಡಿಂಗ್ ಸರ್ಕಲ್, ಲೋಕೋಪಯೋಗಿ ಇಲಾಖೆ, ಕೆ. ಆರ್. ಸರ್ಕಲ್, ಬೆಂಗಳೂರು.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 2 ವಾಸದ ಮನೆಗಳು. 15 ಎಕರೆ ಕೃಷಿ ಜಮೀನು- ಎಲ್ಲ ಸೇರಿ ಒಟ್ಟು ಮೌಲ್ಯ 3,70,20,000 ಆಗಿದೆ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 9,00,000 ನಗದು, ರೂ. 64,62,400 ಬೆಲೆಬಾಳುವ ಚಿನ್ನಾಭರಣಗಳು, ರೂ.8,70,000 ಬೆಲೆಬಾಳುವ ವಾಹನಗಳು- ಎಲ್ಲಾ ಸೇರಿ ಒಟ್ಟು ಮೌಲ್ಯ 82,32,400 ಆಗಿದೆ. ಸ್ಥಿರ ಮತ್ತು ಚರ ಆಸ್ತಿಯ ಒಟು ಮೌಲ್ಯ- ರೂ. 4,52,52,400 ಆಗಿದೆ.

ಅಧಿಕಾರಿ ಸೈಯದ್ ಮುನೀರ್ ಅಹಮದ್

ಸೈಯದ್ ಮುನೀರ್ ಅಹಮದ್, ಸಹಾಯಕ ಕಾರ್ಯಪಾಲಕ ಅಭಿಯಂತರರು (ಎ.ಇ.ಇ), ಕೆ.ಆರ್.ಐ.ಡಿ.ಎಲ್, ಪ್ರಭಾರ ಇ.ಇ. ಕೆ.ಆರ್.ಐ.ಡಿ.ಎಲ್ ಕಛೇರಿ, ರಾಮನಗರ ಜಿಲ್ಲೆ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, ಒಟ್ಟು 7 ವಾಸದ ಮನೆಗಳು, ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ- 4,10,58,968 ಆಗಿದೆ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 8,54,600 ನಗದು, ರೂ 73,47,330 ಬೆಲೆಬಾಳುವ ಚಿನ್ನಾಭರಣಗಳು, ರೂ.21,00,000 ಬೆಲೆ ಬಾಳುವ ವಾಹನಗಳು ಹಾಗೂ ರೂ. 35,00,000 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 1,38,01,930 ಆಗಿದೆ. ಸ್ಥಿರ ಮತ್ತು ಚರ ಆಸ್ತಿಯ ಒಟ್ಟು ಮೌಲ್ಯ 5,48,60,898 ಆಗಿದೆ.

ಅಧಿಕಾರಿ ಹೆಚ್ ಎಸ್ ಸುರೇಶ್

ಕರ್ನಾಟಕ ಲೋಕಾಯುಕ್ತ, ರಾಮನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತವೆ. ಹೆಚ್. ಎಸ್. ಸುರೇಶ್, ಸದಸ್ಯರು, ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ, ತಾವರೆಕೆರೆ ಹೋಬಳಿ,
ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಜಿಲ್ಲೆ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 16 ನಿವೇಶನಗಳು, 1 ವಾಸದ ಮನೆ. 7.6 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 21,27,70,150 ಆಗಿದೆ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 11,97,610 ಆಗಿದೆ. ರೂ.2,11,26,250 ಬೆಲೆ ಬಾಳುವ ಚಿನ್ನಾಭರಣಗಳು, ರೂ 2,07,25.000 ಬೆಲೆಬಾಳುವ ವಾಹನಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ.4,30,48,860 ಆಗಿದೆ. ಇವರ ಒಟ್ಟು ಆಸ್ತಿ ಮೌಲ್ಯ ರೂ.25,58,19,010 ಆಗಿದೆ.

ಅಧಿಕಾರಿ ಮಂಜೇಶ್. ಬಿ

ಮಂಜೇಶ್. ಬಿ, ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕರು, ನಗರ ಮತ್ತು ಯೋಜನೆ, ಆನೇಕಲ್ ಯೋಜನಾ ಪ್ರಾಧೀಕಾರ, ಆನೇಕಲ್, ಬೆಂಗಳೂರು ಜಿಲ್ಲೆ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 11 ನಿವೇಶನಗಳು, 1 ವಾಸದ ಮನೆ. ಎಲ್ಲಾ ಸೇರಿ ರೂ. 1,20,00,000 ಆಗಿದೆ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 5,07,920 ನಗದು, ರೂ.35,97,000 ಬೆಲೆಬಾಳುವ ಚಿನ್ನಾಭರಣಗಳು, ರೂ. 77,16,000 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ.1,98,20,920 ಆಗಿದ್ದು, ಇವರ ಒಟ್ಟು ಮೌಲ್ಯ ರೂ.3,18,20,920 ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments