Homeಕರ್ನಾಟಕ10 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಅಸ್ತಿ ವಿವರ ಬಿಡುಗಡೆ

10 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಅಸ್ತಿ ವಿವರ ಬಿಡುಗಡೆ

ಅಕ್ರಮ ಆಸ್ತಿ ಆರೋಪದ ಮೇಲೆ ಹತ್ತು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 41 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಏಕ ಕಾಲಕ್ಕೆ ದಾಳಿ ನಡೆಸಿ, ಅಪಾರ ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ತುಮಕೂರು, ಮಂಡ್ಯ, ಚಿಕ್ಕಮಗಳೂರು, ಮೈಸೂರು, ಕೊಪ್ಪಳ, ವಿಜಯನಗರ, ಬಳ್ಳಾರಿ. ಹಾಸನ, ಚಾಮರಾಜನಗರ ಮತ್ತು ಮಂಗಳೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ 10 ಪ್ರಕರಣಗಳು ದಾಖಲಾಗಿದ್ದವು.

ದಾಳಿಗೊಳಗಾದ ಅಧಿಕಾರಿಗಳು ಮತ್ತು ಅಸ್ತಿ ವಿವರ

1- ಎ. ಹನುಮಂತರಾಯಪ್ಪ, ಜೂನಿಯರ್ ಇಂಜಿನಿಯರ್ ಪ್ರಭಾರ, ಸಿವಿಲ್, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಕೆಆರ್‌ಐಡಿಎಲ್ ಉಪ ವಿಭಾಗ, ಮಧುಗಿರಿ, ತುಮಕೂರು ಜಿಲ್ಲೆ.

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು ಆರು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ದಾಳಿ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ವಾಸದ ಮನೆಗಳು, ಕೃಷಿ ಜಮೀನು- ಎಲ್ಲಾ ಸೇರಿ ಒಟ್ಟು 2.30.00.000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 40,000/- ನಗದು. ರೂ.8.50,000/- ಬೆಲೆ ಬಾಳುವ ಚಿನ್ನಾಭರಣಗಳು, 14.80,000/- ರೂ ಬೆಲೆ ಬಾಳುವ ವಾಹನಗಳು. 2,00,000/- ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲ ಸೇರಿ ಒಟ್ಟು ಮೌಲ್ಯ 25,30,000/- ಒಟ್ಟು ಮೌಲ್ಯ 2,55,30,000/-

2- ಹರ್ಷ. ಹೆಚ್. ಆರ್, ಇ.ಇ, ಲೋಕೋಪಯೋಗಿ ಇಲಾಖೆ, ಮಂಡ್ಯ ಜಿಲ್ಲೆ.

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಲಾಗಿದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು. 2 ವಾಸದ ಮನೆಗಳು, 15-30 ಎಕರೆ ಕೃಷಿ ಜಮೀನು, ಎಲ್ಲ ಸೇರಿ ಒಟ್ಟು ಮೌಲ್ಯ ರೂ. 1,68.19.000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1.50.000/- ನಗದು. ರೂ. 10.00.000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 55.00.000/- ಬೆಲೆಬಾಳುವ ವಾಹನಗಳು, ರೂ 2.15.50.336/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ 2.82.00,336/- ಒಟ್ಟು ಮೌಲ್ಯ 4,50,19,336/-

3- ಬಿ. ರವಿ, ಸಹಾಯಕ ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಪಿ.ಜಿ. ಕೇಂದ್ರ, ಕೃಷ್ಣದೇವರಾಯ ವಿಶ್ವವಿದ್ಯಾಲಯ, ನಂದಿಹಳ್ಳಿ, ಬಳ್ಳಾರಿ ಜಿಲ್ಲೆ.

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಲಾಗಿದೆ. ದಾಳಿ ವೇಳೆ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 7 ನಿವೇಶನಗಳು, 2 ವಾಸದ ಮನೆಗಳು, ಎಲ್ಲ ಸೇರಿ 1,57.10,000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 59.800/- ನಗದು. ರೂ. 9.12,600/- ಬೆಲೆ ಬಾಳುವ ಚಿನ್ನಾಭರಣಗಳು, ರೂ 23.30,000/- ಬೆಲೆಬಾಳುವ ವಾಹನಗಳು. ರೂ 26.00,000/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು 59.02,400/- ಒಟ್ಟು ಮೌಲ್ಯ 2 2.16.12.400/-

4-‌ ಆರ್ ಆರ್‌ ಭಾಸ್ಕರ್‌, ಗದಗ ವಿದ್ಯುತ್ ಶಕ್ತಿ ನಿಗಮ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 8 ನಿವೇಶನಗಳು, 3 ವಾಸದ ಮನೆಗಳು, 2 ಎಕರೆ ಕೃಷಿ ಜಮೀನು. ಎಲ್ಲ ಸೇರಿ ಒಟ್ಟು ಮೌಲ್ಯ ರೂ. 1.40.35,000/-

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 76.550/- ನಗದು. ರೂ. 20,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 12,10,000/- ಬೆಲೆಬಾಳುವ ವಾಹನಗಳು, ರೂ 1,63,246/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲ ಸೇರಿ 34.49.796/- ಒಟ್ಟು ಮೌಲ್ಯ 1,74.84.796/-

5- ಪಿ. ರವಿ ಕುಮಾರ್, ಎ.ಇ.ಇ. ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ, ಪ್ರಧಾನ ಕಛೇರಿ, ಹುಣಸೂರು ಉಪ ವಿಭಾಗ, ಮೈಸೂರು ಜಿಲ್ಲೆ

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ. 1 ವಾಸದ ಮನೆ. 1 ವಾಣಿಜ್ಯ ಸಂಕೀರ್ಣ, 5.9 ಎಕರೆ ಆಸ್ತಿ ಮಾರ್ಟ್‌ ಗೇಜ್, 4 ಎಕರೆ ಕೃಷಿ ಜಮೀನು. ಎಲ್ಲ ಸೇರಿ ಒಟ್ಟು 2. 1.78.60.000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 560/- ನಗದು. ರೂ.13.30.500/- ಬೆಲೆ ಬಾಳುವ ಚಿನ್ನಾಭರಣಗಳು, ರೂ 4,00,000/- ಬೆಲೆಬಾಳುವ ವಾಹನಗಳು. ರೂ 11.55.400/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲ ಸೇರಿ ಒಟ್ಟು 28.86,460/- ಒಟ್ಟು ಮೌಲ್ಯ 2.07.46.460/-

6- ನೇತ್ರಾವತಿ ಕೆ. ಆರ್. ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರ ಕಛೇರಿ, ವಾಣಿಜ್ಯ ತೆರಿಗೆ ಇಲಾಖೆ, ಚಿಕ್ಕಮಗಳೂರು ಜಿಲ್ಲೆ.

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನಗಳು. 1 ವಾಸದ ಮನೆ. ಎಲ್ಲಾ ಸೇರಿ ಒಟ್ಟು ಮೌಲ್ಯ 1.18.50,000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 4.58,000/- ನಗದು. ರೂ. 7.77.360/- ಬೆಲೆ ಬಾಳುವ ಚಿನ್ನಾಭರಣಗಳು, ರೂ 10,00,000/- ಬೆಲೆಬಾಳುವ ವಾಹನಗಳು, ರೂ 16,40.640/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು. ಎಲ್ಲ ಸೇರಿ ಒಟ್ಟು ಮೌಲ್ಯ 77.98,000/- ಒಟ್ಟು ಮೌಲ್ಯ 1.98.48.000/-

7- ರೇಣುಕಮ್ಮ, ವಲಯ ಅರಣ್ಯಾಧಿಕಾರಿ, ಹೂವಿನ ಹಡಗಲಿ ವಲಯ, ಅರಣ್ಯ ಇಲಾಖೆ, ವಿಜಯನಗರ ಜಿಲ್ಲೆ.

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 2 ವಾಸದ ಮನೆಗಳು, 11 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1.91.48,000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 2.09,000/- ನಗದು, ರೂ. 32,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ 29.00.000/- ಬೆಲೆಬಾಳುವ ವಾಹನಗಳು, ರೂ 23.08.265/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಸೇರಿ ಒಟ್ಟು 86.17.265/- ಒಟ್ಟು ಮೌಲ್ಯ 2.77.65.265/-

8- ಎಂ. ಎನ್ ಯಜೇಂದ್ರ, ಎ.ಇ.ಇ. ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಮೈಸೂರು.

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು. 1 ವಾಸದ ಮನೆ. 2 ಎಕರೆ
    ಕೃಷಿ ಜಮೀನು. ಎಲ್ಲ ಸೇರಿ ಒಟ್ಟು ಮೌಲ್ಯ ರೂ. 66,00,000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 86.000/- ನಗದು. ರೂ. 31,26,900/- ಬೆಲೆ ಬಾಳುವ ಚಿನ್ನಾಭರಣಗಳು, ರೂ 8,00,000/- ಬೆಲೆಬಾಳುವ ವಾಹನಗಳು. ಎಲ್ಲ ಸೇರಿ ಒಟ್ಟು ಮೌಲ್ಯ 40.12.900/- ಒಟ್ಟು ಮೌಲ್ಯ 1.06.12.900/-

9- ಶಾಂತಕುಮರ. ಹೆಚ್. ಎಂ. ಇ.ಇ(ವಿ), ಎಂ. ಆರ್. ಟಿ ವಿಭಾಗ, ಮೆಸ್ಕಾಂ, ಅತ್ತಾವರ, ಮಂಗಳೂರು ಜಿಲ್ಲೆ.

  • ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, ಈ ವೇಳೆ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು, 2 ವಾಸದ ಮನೆಗಳು, ಎಲ್ಲಾ ಸೇರಿ 1,27.80.000/-
  • ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 28,24,280/- ಬೆಲೆ ಬಾಳುವ ಚಿನ್ನಾಭರಣಗಳು, ರೂ 9.60,000/- ಬೆಲೆಬಾಳುವ ವಾಹನಗಳು, ರೂ4.00,000/- ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು, ರೂ. 74.77.000/- ಬ್ಯಾಂಕ್ ಉಳಿತಾಯ. ಎಲ್ಲಾ ಸೇರಿ ಒಟ್ಟು ಮೌಲ್ಯ 1,16,61,280/- ಒಟ್ಟು ಮೌಲ್ಯ 2,44.41.280/-

10 – ಜಗನ್ನಾಥ ಜಿ. ಪಿ. ಆಹಾರ ನಿರೀಕ್ಷಕರು, ಹಾಸನ ತಾಲ್ಲೂಕು, ಹಾಸನ ಜಿಲ್ಲೆ.

ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದ್ದು, ಶೋಧನಾ ಸಮಯದಲ್ಲಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 7 ನಿವೇಶನಗಳು. 1 ವಾಸದ ಮನೆ. ಎಲ್ಲಾ ಸೇರಿ
1,68,83,000/-

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 89.000/- ನಗದು. 14.38.000/- ಬೆಲೆ ಬಾಳುವ ಚಿನ್ನಾಭರಣಗಳು, ರೂ6.20,000/- ಬೆಲೆಬಾಳುವ ವಾಹನಗಳು ಎಲ್ಲ ಸೇರಿ 21.47.000/-
1.90.30,000/- ಆಸ್ತಿ ಹೊಂದಿರುವುದು ಕಂಡುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments