Homeಕರ್ನಾಟಕಕೊಪ್ಪಳ ಲೋಕಸಭಾ ಕ್ಷೇತ್ರ | ಸಂಸದ ಸಂಗಣ್ಣ ಕರಡಿಗೆ ಕಾಂಗ್ರೆಸ್‌ ಗಾಳ

ಕೊಪ್ಪಳ ಲೋಕಸಭಾ ಕ್ಷೇತ್ರ | ಸಂಸದ ಸಂಗಣ್ಣ ಕರಡಿಗೆ ಕಾಂಗ್ರೆಸ್‌ ಗಾಳ

ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಕಾಂಗ್ರೆಸ್‌ ಸೆಳೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಸಂಗಣ್ಣ ಕರಡಿ ಅವರ ಸಂಪರ್ಕದಲ್ಲಿದ್ದು, ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.

ಇತ್ತ ಸಂಗಣ್ಣ ಕರಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ಮಾ. 21ರಂದು ಕೊಪ್ಪಳದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಬಸವರಾಜ ಕ್ಯಾವಟರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಎರಡೂ ಅವಧಿಗೂ ಸಂಸದರಾಗಿದ್ದ ಸಂಗಣ್ಣ ಅವರಿಗೆ ಇದು ಸಹಜವಾಗಿ ಬೇಸರ ತರಿಸಿದೆ.

ಮಂಗಳವಾರ ಕೊಪ್ಪಳದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “21ರಂದು ಸಭೆ ನಡೆಸಿ ಕಾರ್ಯಕರ್ತರು ಹಾಗೂ ಪಕ್ಷದ ಎರಡನೆ ಹಂತದ ನಾಯಕರ ಅಭಿಪ್ರಾಯ ಪಡೆಯುವೆ. ಅಲ್ಲಿ ಯಾವ ಅಭಿಪ್ರಾಯ ವ್ಯಕ್ತವಾಗುತ್ತದೆಯೊ ಅದನ್ನು ಆಧರಿಸಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುವೆ” ಎಂದಿದ್ದಾರೆ.

“ಟಿಕೆಟ್ ಕೈ ತಪ್ಪಿದ್ದಕ್ಕೆ ಸೌಜನ್ಯಕ್ಕೂ ಪಕ್ಷದ ವರಿಷ್ಠರು ಕರೆ ಮಾಡಿಲ್ಲ, ನನಗೆ ಟಿಕೆಟ್ ತಪ್ಪಿಸಿದವರು ಯಾರು? ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ? ಎನ್ನುವ ಮೂರು ಪ್ರಶ್ನೆಗಳಿಗೆ ಬಿಜೆಪಿಯ ರಾಜ್ಯದ ಯಾವ ನಾಯಕರೂ ಉತ್ತರ ನೀಡಿಲ್ಲ. ನನಗೆ ಉತ್ತರ ದೊರಕಿದರೆ ಮಾತ್ರ ಬಿಜೆಪಿ ಜೊತೆಗಿರುವೆ” ಎಂದರು.

“ನನಗೆ ಟಿಕೆಟ್ ನೀಡದ್ದಕ್ಕೆ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ನನಗೆ ಅಧಿಕಾರದ ಆಸೆಯಿಲ್ಲ, ಕಾರ್ಯಕರ್ತರ ಸಲುವಾಗಿ ಸಭೆ ನಡೆಸುತ್ತಿದ್ದೇನೆ. ಕಾಂಗ್ರೆಸ್ ಸೇರಬೇಕೊ, ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೊ ಅಥವಾ ಬಿಜೆಪಿಯಲ್ಲಿಯೇ ಮುಂದುವರಿಯಬೇಕೊ? ಎನ್ನುವ ಬಗ್ಗೆ ಸಭೆ ನಂತರ ನಿರ್ಧರಿಸುವೆ” ಎಂದು ಹೇಳಿದರು‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments