Homeಕರ್ನಾಟಕಕೋಲಾರ ಟಿಕೆಟ್‌ | ಬಣ ಬಡಿದಾಟ ಶಮನ; ಸಿಎಂ, ಡಿಸಿಎಂ ಸಭೆ ಯಶಸ್ವಿ - ಅಭ್ಯರ್ಥಿ...

ಕೋಲಾರ ಟಿಕೆಟ್‌ | ಬಣ ಬಡಿದಾಟ ಶಮನ; ಸಿಎಂ, ಡಿಸಿಎಂ ಸಭೆ ಯಶಸ್ವಿ – ಅಭ್ಯರ್ಥಿ ಯಾರು

ಕೋಲಾರ ಟಿಕೆಟ್‌ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಬಣಗಳ ಬಡಿದಾಟವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್‌ ಶಮನಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕೋಲಾರ ಕ್ಷೇತ್ರದಲ್ಲಿ ಸಚಿವ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಗುದ್ದಾಟಕ್ಕೆ ಕೊನೆ ಹಾಡಲು ಗುರುವಾರ ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ನಡೆಯಿತು.

ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸಿಕೊಂಡು ಹೋಗುವ ತೀರ್ಮಾನಕ್ಕೆ ಹೋಗುವುದಾಗಿ, ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಎರಡು ಬಣಗಳ ನಾಯಕರು ಮಾತುಕೊಟ್ಟಿದ್ದಾರೆ ಎನ್ನಲಾಗಿದೆ.

ಸಭೆ ಬಳಿಕ ಸಿಎಂ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ ಸಿ ಸುಧಾಕರ್, “ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸಿಕೊಂಡು ಹೋಗುತ್ತೇವೆ. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ನಮ್ಮಿಂದ ಪಕ್ಷಕ್ಕೆ ಹಾನಿಯಾಗಲು ಅವಕಾಶ ನೀಡುವುದಿಲ್ಲ” ಎಂದರು.

“ಪಕ್ಷದ ಆದೇಶಕ್ಕೆ ಗೌರವ ಕೊಟ್ಟು ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ. ನಿನ್ನೆ(ಮಾರ್ಚ್ 28) ಆದಂತ ಸಮಸ್ಯೆ ಬಗ್ಗೆ ಸಿಎಂ, ಡಿಸಿಎಂ ಬಳಿ ಹೇಳಿಕೊಂಡಿದ್ದೇವೆ. ರಾಜೀನಾಮೆ ನೀಡಲು ಮುಂದಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದರು.

“ಇದು ಎಡಗೈ, ಬಲಗೈ ಸಂಘರ್ಷ ಅಲ್ಲ. ಕೆಲವರ ಅಭಿಪ್ರಾಯ ಸಂಖ್ಯೆ ಜಾಸ್ತಿ ಇದೆ. ಕೊಡಿ ಅಂತ ಇತ್ತು. ಅದೊಂದು ಕೆಟ್ಟ ಸಮಯ. ಅಂತಿಮವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಇದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ನಾವು ಕ್ಷಮೆ ಕೇಳಿದ್ದೇವೆ, ಯಾವುದೇ ಅಭ್ಯರ್ಥಿ ಬಗ್ಗೆ ಚರ್ಚೆ ಆಗಿಲ್ಲ” ಎಂದು ತಿಳಿಸಿದರು.

ಕೋಲಾರ ಉಸ್ತುವಾರಿಸಚಿವ ಬೈರತಿ ಸುರೇಶ್ ಮಾತನಾಡಿ, “ಸಭೆಯಲ್ಲಿ ಕೋಲಾರ ಜಿಲ್ಲೆಯ ಪಕ್ಷದ ಎಲ್ಲಾ ಶಾಸಕರೂ ಭಾಗವಹಿಸಿದ್ದು, ಸಂಧಾನ ಸಭೆ ಯಶಸ್ವಿಯಾಗಿದೆ. ಹೈಕಮಾಂಡ್ ಆದೇಶಕ್ಕೆ ಬದ್ದ ಎಂದು ಶಾಸಕರು ಹೇಳಿದ್ದಾರೆ. ಈಗ ಸಿಎಂ ಡಿಸಿಎಂ ಆದೇಶಕ್ಕೆ ಬದ್ದ ಎಂದು ಹೇಳಿದ್ದಾರೆ. ಟಿಕೆಟ್ ವಿಚಾರದಲ್ಲಿ ಯಾವುದೇ ವ್ಯಕ್ತಿಯ ಹೆಸರು ಚರ್ಚೆ ಆಗಿಲ್ಲ” ಎಂದರು.

ಕೋಲಾರ ಕಾಂಗ್ರಸ್ ಅಭ್ಯರ್ಥಿ ಪೈಪೋಟಿಯಲ್ಲಿ ಸಚಿವ ಕೆಎಚ್​ ಮುನಿಯಪ್ಪ ಕುಟುಂಬ ಸದಸ್ಯ ಚಿಕ್ಕಪೆದ್ದಣ್ಣ ಮತ್ತು ರಮೇಶ್ ಕುಮಾರ್ ಬಣದ ಎಲ್‌ ಹನುಮಂತಯ್ಯ ಹೆಸರು ಕೇಳಿಬಂದಿದೆ. ಸಿಎಂ, ಡಿಸಿಎಂ ಯಾರಿಗೆ ಮಣೆ ಹಾಕುತ್ತಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments