ಕೋಲಾರ: ನಗರದ ಖಾಸಗಿ ಬಸ್ ನಿಲ್ಲಾಣದ ಸಮೀಪ ಬೆಳಗ್ಗೆ ಹನ್ನೊಂದರ ಸುಮಾರಿಗೆ ವಿಕೋಟದಿಂದ ಚಿಕ್ಕಬಳ್ಳಾಪುರದತ್ತ ಹೊರಟಿದ್ದ ಖಾಸಗಿ ಬಸ್ ಹರಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಂಗಾರಪೇಟೆ ತಾಲ್ಲೂಕಿನ ನಾಯಕನ ಹಳ್ಳಿಯ ರಾಮಕ್ಕ (58) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಯಾಗಿದ್ದು ಆಕೆಯ ಗಂಡ ಶ್ರೀನಿವಾಸ (65) ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ರಾಮಕ್ಕ ಹಾಗೂ ಶ್ರೀನಿವಾಸ ದಂಪತಿಗಳು ನಗರದ ಹಳೇ ಬಸ್ ನಿಲ್ಲಾಣದಲ್ಲಿ ಸಮೀಪದ ಗಂಗಮ್ಮನ ದೇವಾಲಯಕ್ಕೆ ಹೋಗಲು ಮೆಕ್ಕೆ ಸರ್ಕಲ್ ನ ತಿರುವಿಗೆ ಬರುತ್ತಿದ್ದಂತೆ ಅತೀ ವೇಗದಿಂದ ಬಂದ ಭಾರತೀ ಖಾಸಗೀ ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದರೆ. ಆಕೆಯೊಂದಿಗಿದ್ದ ಆಕೆಯ ಗಂಡ ಶ್ರೀನಿವಾಸ್ ತಲೆಗೂ ಬಲವಾದ ಗಾಯವಾಗಿದೆ.
ಭಾರತಿ ಖಾಸಗಿ ಬಸ್ ಸನಿಹದಲ್ಲೇ ಬರುತ್ತಿದ್ದ ಸರ್ಕಾರಿ ಬಸ್ಗೆ ಓವರ್ ಟೇಕ್ ಮಾಡಲು ಹೊರಟಾಗ ಈ ದುರ್ಘಟನೆ ನಡೆಯಿತೆಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.