2024ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕಾಂತಾರ ಚಿತ್ರಕ್ಕಾಗಿ ಕನ್ನಡ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಕೆಜಿಎಫ್ -2 ಚಿತ್ರ ಅತ್ಯುತ್ತಮ ಕನ್ನಡ ಚಲನಚಿತ್ರವಾಗಿ ಆಯ್ಕೆ ಮಾಡಲಾಗಿದೆ. ಕಾಂತಾರ ಚಿತ್ರವನ್ನು ಸ್ವತಃ ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕ ನಟರಾಗಿ ಅಭಿನಯಿಸಿದ್ದರು. ಸಂಪೂರ್ಣ ಮನರಂಜನೆ ನೀಡಿದ ಚಿತ್ರವಾಗಿ ಕಾಂತಾರಾ ಚಿತ್ರವನ್ನು ಆಯ್ಕೆ ಮಾಡಲಾಗಿದೆ.
ಕನ್ನಡಿಗರಾದ ಸುರೇಶ್ ಅರಸ್ ಅವರು ‘ಮಧ್ಯಂತರ’ ಚಿತ್ರದ ಸಂಕಲನಕ್ಕೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಲಯಾಳಂನ ಅಟ್ಟಂ ಸಿನಿಮಾಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ನಟಿ ಪ್ರಶಸ್ತಿ ಇಬ್ಬರ ಪಾಲಾಗಿದ್ದು, ಮಲಯಾಳಂನ ತಿರುಚಿತ್ರಬಾಲಂನ ನಿತ್ಯ ಮೆನನ್ ಹಾಗೂ ಹಿಂದಿಯ ಕುಟ್ಚಾ ಎಕ್ಸ್‌ಪ್ರೆಸ್ ಸಿನಿಮಾಕ್ಕೆ ಮಾನಸಿ ಪರೇಖ್ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಹಿಂದಿಯ ಉನಚಿ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಹಿನ್ನಲೆ ಗಾಯಕಿ ಬಾಂಬೆ ಜಯಶ್ರೀ ಹಾಗೂ ಅರ್ಜಿತ್ ಸಿಂಗ್ ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಲಭಿಸಿದೆ. ಉನಚಿ ಚಿತ್ರಕ್ಕಾಗಿ ನೀನಾ ಗುಪ್ತಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ಹಿಂದಿಯ ಗುಲ್‌ಮೋರ್ ಸಿನಿಮಾದ ಪಾಲಾಗಿದೆ. ಅತ್ಯುತ್ತಮ ವಿಎಫ್‌ಎಕ್ಸ್ ವಿಭಾಗದಲ್ಲಿ ಹಿಂದಿಯ ಬ್ರಹ್ಮಾಸ್ತ್ರ ಚಿತ್ರಕ್ಕೆ ಲಭಿಸಿದೆ.