Homeಕರ್ನಾಟಕಕೆಇಎ ಪರೀಕ್ಷಾ ಅಕ್ರಮ | ತನಿಖೆ ವೇಳೆ ಸ್ಫೋಟಕ ಮಾಹಿತಿ ಪತ್ತೆ, 9 ಆರೋಪಿಗಳು ಪೊಲೀಸ್...

ಕೆಇಎ ಪರೀಕ್ಷಾ ಅಕ್ರಮ | ತನಿಖೆ ವೇಳೆ ಸ್ಫೋಟಕ ಮಾಹಿತಿ ಪತ್ತೆ, 9 ಆರೋಪಿಗಳು ಪೊಲೀಸ್ ಕಸ್ಟಡಿಗೆ

10 ದಿನಗಳ ಹಿಂದೆ ನಡೆದ ಕೆಇಎ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಎಂ ನ್ಯಾಯಾಧೀಶರ ಅನುಮತಿ ಪಡೆದು ಬಂಧಿತ 16 ಆರೋಪಿಗಳ ಪೈಕಿ 9 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಸಿಪಿಐ ಹಂತದ ಐದು ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, 10 ದಿನಗಳ ಕಾಲ 9 ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಯಾದಗಿರಿ ನಗರದ ಐದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ ನಡೆದಿದ್ದು, ಹೊರಗಿದ್ದು ಪರೀಕ್ಷೆ ಬರೆಯಲು ಸಹಾಯ ಮಾಡಿದ 7 ಜನರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

16 ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ದೊರಕಿದೆ. ಆರೋಪಿಗಳ ಮೊಬೈಲ್ ಜಪ್ತಿ ಮಾಡಿ ಪೊಲೀಸರು ಪರಿಶೀಲಿಸಿಲಿಸಿದ್ದಾರೆ.

ಸರ್ಕಾರ ಎಂಬ ಹೆಸರಲ್ಲಿ ಸೇವ್ ಆಗಿದ್ದ ನಂಬರ್‌ನಿಂದ ವಾಟ್ಸಪ್ ಕಾಲ್ ಮಾಡಲಾಗಿದೆ. ಪರೀಕ್ಷೆಯ ಹಿಂದಿನ ದಿನ ಬಂಧನಕ್ಕೊಳಗಾದ ಆರೋಪಿ ನಂಬರ್ಗೆ ಆಡಿಯೋ ಕಾಲ್ ಬಂದಿದೆ. ಆಡಿಯೋ ಕಾಲ್ ಮಾಡಿ ಮಾಹಿತಿ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸರ್ಕಾರ ಎಂಬ ಹೆಸರಿನ ನಂಬರ್ ಕಲಬುರಗಿ ಜಿಲ್ಲೆ ಅಫಜಲಪುರದ್ದು. ಬಂಧನಕ್ಕೊಳಗಾದ 16 ಜನರಲ್ಲಿ 15 ಆರೋಪಿಗಳು ಅಫಜಲಪುರದವರಾಗಿದ್ದಾರೆ.

ಆರ್ ಡಿ ಪಾಟೀಲ್ ಬಂಧನಕ್ಕೆ ಆಗ್ರಹ

ಅಕ್ರಮದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್‌ನನ್ನು ಬಂಧಿಸುವಂತೆ ಯಾದಗಿರಿಯಲ್ಲಿ ಬಿಜೆಪಿ ಜಿಲ್ಲಾ ಘಕಟದಿಂದ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಗೆ ಪೊಲೀಸರ ನಿರಾಕರಣೆ ಮಧ್ಯೆಯೂ ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದು, ನೀರು ತಂದು ಸ್ವತಃ ಪೊಲೀಸರು ಬೆಂಕಿ ಹಾರಿಸಿದ್ದಾರೆ.

ಪೋಷಕರ ಪೀಕಲಾಟ

ಪ್ರಕರಣದ ಕಿಂಗ್‌ ಪಿನ್‌ ಆರ್ ಡಿ ಪಾಟೀಲ್ ಜೊತೆ ಡಿಲ್ ಮಾಡಿಕೊಂಡಿದ್ದ ಪೋಷಕರಿಗೂ ಪೀಕಲಾಟ ಆರಂಭವಾಗಿದೆ. ಅತ್ತ ಮಕ್ಕಳಿಗೆ ನೌಕರಿಯು ಇಲ್ಲದೇ, ಹಣವೂ ಇಲ್ಲದೇ ಪೋಷಕರು ಅಲೆದಾಡುತ್ತಿದ್ದಾರೆ. ಹಣ ವಾಪಾಸು ಕೊಡುವಂತೆ ಅಭ್ಯರ್ಥಿಗಳ ಪೋಷಕರು ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments