Homeಕರ್ನಾಟಕಶೆಟ್ಟರ್‌ ಪಕ್ಷ ಬಿಟ್ಟಿದ್ದು ಒಳ್ಳೆಯದಾಯಿತು, ಅಲ್ಪಸಂಖ್ಯಾತ ಸಮುದಾಯ ಅವ​ರನ್ನು ಒಪ್ಪಿರಲಿಲ್ಲ, ಡಿ ಕೆ ಶಿವಕುಮಾರ್‌

ಶೆಟ್ಟರ್‌ ಪಕ್ಷ ಬಿಟ್ಟಿದ್ದು ಒಳ್ಳೆಯದಾಯಿತು, ಅಲ್ಪಸಂಖ್ಯಾತ ಸಮುದಾಯ ಅವ​ರನ್ನು ಒಪ್ಪಿರಲಿಲ್ಲ, ಡಿ ಕೆ ಶಿವಕುಮಾರ್‌

ನೀತಿ, ಸಿದ್ಧಾಂತದಡಿ ರಾಜಕೀಯ ಮಾಡುವವರು ನಾವು. ಅಲ್ಪಸಂಖ್ಯಾತ ಸಮುದಾಯ ಕೂಡ ಜಗದೀಶ್ ಶೆಟ್ಟರ್‌ ಅವ​ರನ್ನು ಒಪ್ಪಿರಲಿಲ್ಲ. ಇದರಿಂದ ನಮ್ಮ ಪಕ್ಷ ಸಂಘಟನೆಗೂ ಕಷ್ಟ ಆಗುತ್ತಿತ್ತು. ಶೆಟ್ಟರ್​​​ ಹೋಗಿದ್ದೇ ಒಳ್ಳೆಯದು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದರು.

ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ ವಿಚಾರ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ನೂರಾರು ಜನ ಬರ್ತಾರೆ, ನೂರಾರು ಜನ ಹೋಗುತ್ತಾರೆ. ಜಗದೀಶ್ ಶೆಟ್ಟರ್ ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಲಿ” ಎಂದರು.

“ಬಿಜೆಪಿ ವಿರುದ್ಧ ದೊಡ್ಡ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ನಮ್ಮ ಪಕ್ಷದ ಕಾರ್ಯಕರ್ತರ ಟಿಕೆಟ್ ಅವರಿಗಾಗಿ ನಾವು ತ್ಯಾಗ ಮಾಡಿದೆವು. ಮಾಜಿ ಸಿಎಂ ಎಂಬ ಘನತೆಗೆ ಗೌರವ ಕೊಟ್ಟು ಟಿಕೆಟ್ ನೀಡಿದೆವು. ಸೋತರೂ ಕೂಡ ಅವರನ್ನು ನಂಬಿ ನಾವು ಅವರನ್ನು ಎಂಎಲ್‌ಸಿ ಮಾಡಿದೆವು. ಏಕಾಏಕಿ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆ” ಎಂದರು.

“ಬಿಜೆಪಿ ವಿರುದ್ದ ಅವರು ಆರೋಪ ಮಾಡಿದ್ದಕ್ಕೆ ಅವರೇ ಉತ್ತರ ಕೊಡಬೇಕು. ಬಿಜೆಪಿ ದೂರ ಇಡಬೇಕು ಅಂತ ನಾವು ಜೆಡಿಎಸ್ ಜೊತೆಗೆ ಸರ್ಕಾರ ಮಾಡಿದ್ದೆವು. ಆಪರೇಷನ್ ಕಮಲ ಮಾಡಿ ಯಾರು ಸಮ್ಮಿಶ್ರ ಸರ್ಕಾರ ತೆಗೆದರೋ ಅವರ ಜೊತೆಗೇ ಈಗ ಜೆಡಿಎಸ್ ತಬ್ಬಿಕೊಳ್ತಿಲ್ವಾ? ಬಿಜೆಪಿಯ ವಕ್ತಾರರಾಗಿಲ್ವಾ ಹೆಚ್ ​ಡಿ ಕುಮಾರಸ್ವಾಮಿ? ಹಾಗೆ ರಾಜಕಾರಣದಲ್ಲಿ ಎಲ್ಲವೂ ಆಗುತ್ತದೆ” ಎಂದು ಡಿಕೆ ಶಿವಕುಮಾರ್ ಹೇಳಿದರು.

ಲಕ್ಷ್ಮಣ ಸವದಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, “ನಾನು ಕಾಂಗ್ರೆಸ್​​ಗೆ ವೈಯಕ್ತಿಕವಾಗಿ ಬಂದಿದ್ದೇನೆ. ಒಟ್ಟಿಗೆಯಾಗಿ ಕೆಲಸ ಮಾಡೋಣ” ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಸವದಿ ದೊಡ್ಡ ಅಂತರದಲ್ಲಿ ಚುನಾವಣೆ ಗೆದ್ದಿದ್ದಾರೆ. ಅವರು ನಮ್ಮ ನಾಯಕರಾಗಿದ್ದಾರೆ. ಬಿಜೆಪಿಯವರು ಎಲ್ಲರನ್ನೂ ಸೆಳೆಯಲು ಪ್ರಯತ್ನ ಮಾಡುತ್ತಾರೆ. ನಮಗೆ ಗೊತ್ತಿದೆ, ಆ ಬಗ್ಗೆ ನಾನು ಮಾತನಾಡಲ್ಲ. ನಾವು ಮುಂದಾದರೆ ಎಷ್ಟು ಮನೆಗಳು ಖಾಲಿಯಾಗಬಹುದು ಎಂದು ಅವರು ಯೋಚನೆ ಮಾಡಲಿ” ಎಂದು ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments