“ಈಶ್ವರಪ್ಪನವರೇ, ನಾನೇ ನಿಮ್ಮ ಮುಂದೆ ಬಂದು ನಿಲ್ಲುವೆ, ನನ್ನ ಕೊಂದು ಬಿಡಿ. ನಿಮ್ಮ ಆಸೆ ಈಡೇರಿಸಿಕೊಳ್ಳಿ” ಎಂದು ಸಂಸದ ಡಿ ಕೆ ಸುರೇಶ್ ಆಹ್ವಾನ ನೀಡಿದರು.
“ಡಿ ಕೆ ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಬೇಕು’ ಎಂದು ಹೇಳಿಕೆ ನೀಡಿದ್ದ ಕೆ ಎಸ್ ಈಶ್ವರಪ್ಪ ಅವರ ಮಾತಿಗೆ ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ನಾವು ಭಾರತ ಒಕ್ಕೂಟದಲ್ಲೇ ಇರುವವರು. ನಾನು ಭಾರತ ವಿರೋಧಿ ಅಲ್ಲ. ಎಲ್ಲ ವಿಷಯಗಳಲ್ಲಿ ಕರ್ನಾಟಕದ ಮೇಲೆ ಆಗುತ್ತಿರುವ ಅನ್ಯಾಯ ತಡೆಯಲಾಗದೆ ಹಾಗೇ ಮಾತನಾಡಿರುವೆ. ಅದಕ್ಕಾಗಿ ನನ್ನನ್ನು ಕೊಲ್ಲಬೇಕು ಎಂದರೆ ಏನು ಮಾಡುವುದು. ಅವರಿಗೆ ಕೊಲ್ಲುವ ಆಸೆ ಈಶ್ವರಪ್ಪ ಮುಂದೆ ಹೋಗಿ ನಿಲ್ಲುವೆ. ಕೊಂದು ತಮ್ಮ ಆಸೆ ಈಡೇರಿಸಿಕೊಳ್ಳಲಿ” ಎಂದರು.
ಈಶ್ವರಪ್ಪ ವಿರುದ್ಧ ಈಗಾಗಲೇ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಎನ್ ಎಸ್ ಯುಐ ಕಾರ್ಯಕರ್ತರು ದೂರು ಸಲ್ಲಿಸಿದ್ದು, ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.