Homeಕರ್ನಾಟಕಹೆಡಗೇವಾರ್‌ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ: ಗೂಳಿಹಟ್ಟಿ ಶೇಖರ್‌ ಆಗ್ರಹ

ಹೆಡಗೇವಾರ್‌ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ: ಗೂಳಿಹಟ್ಟಿ ಶೇಖರ್‌ ಆಗ್ರಹ

ನಾಗ್ಪುರದಲ್ಲಿ ಹೆಡಗೇವಾರ್‌ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಸವಾಲು ಹಾಕಿದ್ದಾರೆ.

ಜಾತಿ ಕಾರಣಕ್ಕೆ ನಾಗ್ಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದ ಒಳಗೆ ತನಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಆರೋಪಿಸಿ ಸುದ್ದಿಯಾಗಿದ್ದ ಬಿಜೆಪಿಯ ಮಾಜಿ ಸಚಿವ, ಶಾಸಕ ಗೂಳಿಹಟ್ಟಿ ಶೇಖರ್ ಅವರದ್ದೆನ್ನಲಾದ ಮತ್ತೊಂದು ಆಡಿಯೋ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದೆ.

“ವಿಡಿಯೋ ರಿಲೀಸ್ ಮಾಡಿದರೆ ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ” ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮಾಡಿದ್ದ ಆರೋಪಕ್ಕೆ ಬಿಜೆಪಿ ನಾಯಕರು ನೀಡಿದ್ದ ಆಕ್ಷೇಪದ ಹೇಳಿಕೆಗಳಿಗೆ ಆಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಶಾಸಕ ಪಿ ರಾಜೀವ್, ಚಲವಾದಿ ನಾರಾಯಣಸ್ವಾಮಿ, ಮತ್ತು ಸುರೇಶ್ ಕುಮಾರ್‌ಗೆ ವಾಟ್ಸಾಪ್‌ ಆಡಿಯೋ ಮೂಲಕ ಸವಾಲು ಹಾಕಿದ್ದಾರೆ.

“ಸಿಸಿ ಕ್ಯಾಮರಾ ದೃಶ್ಯ ಇರುತ್ತೆ ಅಲ್ವಾ? ರಿಲೀಸ್ ಮಾಡಿ. ರಿಲೀಸ್ ಮಾಡಿದ್ರೆ ನಿಮ್ಮ ಮನೆ ಗೇಟ್​ಕೀಪರ್ ಆಗಿ ಕೆಲಸ ಮಾಡ್ತೇನೆ. ಕೆಲವು ತಿಂಗಳ ಹಿಂದೆ ನಾನು ಈ ವಿಷಯವನ್ನು ಹೇಳಿದ್ದರೆ ಇನ್ನಷ್ಟು ಸೀಟ್ ಕಳೆದುಕೊಳ್ತಿದ್ದರು ಎಂದು” ಆಡಿಯೋ ಸಂದೇಶ ಮೂಲಕ ಟಾಂಗ್ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments