ಚೀನಾದಲ್ಲಿ ನ್ಯುಮೋನಿಯಾ ಶುರುವಾಗಿದೆ. ಡಬ್ಲ್ಯುಎಚ್‌ಒ ಕೂಡ ಇದರ ಬಗ್ಗೆ ಎಚ್ಚರಿಸಿದೆ. ಭಯ ಬೀಳುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ಕೊಟ್ಟಿದೆ. ನಾವು ಆಸ್ಪತ್ರೆಗಳಿಗೆ ಸೂಚನೆ ಕೊಟ್ಟಿದ್ದೇವೆ. ಎಲ್ಲ ಸೌಲಭ್ಯ ಮಾಡಿಕೊಳ್ಳುವಂತೆ ಹೇಳಿದ್ದೇವೆ” ಎಂದರು.
“ಡಿಸೆಂಬರ್‌ನಲ್ಲಿ ಕೋಲ್ಡ್ ಹೆಚ್ಚಿರುತ್ತದೆ. ಕೆಮ್ಮು, ಜ್ವರ ಬಂದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇದೆ. ಸರಿಯಾಗಿ ಆಸ್ಪತ್ರೆಗೆ ಡ್ರಗ್ಸ್ ಸಪ್ಲೈ ಆಗ್ತಿಲ್ಲ. ಇದರಿಂದ ಸಮಸ್ಯೆಯಾಗ್ತಿದೆ. ಇದರ ಬಗ್ಗೆ ನಾವು ಗಮನಹರಿಸಿದ್ದೇವೆ” ಎಂದು ಹೇಳಿದರು.
“ಭ್ರೂಣ ಹತ್ಯೆಗಳು ನಡೆಯುತ್ತಿವೆ. ಹೆಣ್ಣುಮಕ್ಕಳ ಅನುಪಾತ ಕಡಿಮೆಯಾಗ್ತಿದೆ. ಇದರಿಂದ ಭ್ರೂಣ ಹತ್ಯೆ ಆಗ್ತಿದೆ ಅನ್ನೋದು ಅರ್ಥ ಒಂದೇ ಕಡೆ ಅಲ್ಲ, ರಾಜ್ಯದ ಹಲವು ಕಡೆ ಇದೆ. ಇದೊಂದು ಸಾಮಾಜಿಕ ಪಿಡುಗು. ಕೇವಲ ಆರೋಗ್ಯ ಇಲಾಖೆಗೆ ಸೀಮಿತವಲ್ಲ. ಇದೊಂದು ಸೋಶಿಯಲ್ ಪ್ರಾಬ್ಲಂ ಕೂಡ ಹೌದು. ನಾವು ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ” ಎಂದು ತಿಳಿಸಿದರು.
“ಭ್ರೂಣ ಹತ್ಯೆ ಪ್ರಕರಣ ವಿಚಾರವಾಗಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ಕೊಡಬೇಕು. ಎಷ್ಟು ಅಬಾಷನ್ ಆಗ್ತಿದೆ ಐಡೆಂಟಿಟಿ ಮಾಡಬೇಕು. ರಿಜಿಸ್ಟರ್ ಆಗಿ ಬರದೇ ಹೋದರೆ ಚೆಕ್ ಮಾಡಬೇಕು. ಇದರ ಬಗ್ಗೆ ಸರಿಯಾದ ಪ್ರೊಸಿಜರ್ ಆಗಬೇಕು” ಎಂದು ಸೂಚಿಸಿದ್ದೇನೆ ಎಂದರು.
“ನಾಳೆ, ನಾಡಿದ್ದು ಇದರ ಬಗ್ಗೆ ಪ್ರೊಸೀಜರ್ ಮಾಡುತ್ತೇವೆ. ನಾವು ಕೂಡ ಇಡೀ ರಾಜ್ಯದಲ್ಲಿ ಪ್ರವಾಸ ಮಾಡ್ತೇವೆ. ಖುದ್ದು ನಾವೇ ಪರಿಶೀಲನೆ ಮಾಡ್ತೇವೆ. ಈ ಬಗ್ಗೆ ಸಚಿವರುಗಳ ಸಮಿತಿ ಕೂಡ ರಚನೆ ಮಾಡುತ್ತೇವೆ. ನಮ್ಮ ಅಧಿಕಾರಿಗಳು ಮಂಡ್ಯಕ್ಕೂ ಹೋಗಿದ್ದಾರೆ” ಎಂದರು.
ಆಯುಷ್ಮಾನ್ ಭಾರತ್ ಕಾರ್ಡ್ ಸಮಸ್ಯೆ ವಿಚಾರವಾಗಿ ಮಾತನಾಡಿದ ಸಚಿವರು, “ಕಾರ್ಡ್‌ಗಳು ವಿತರಣೆಯಾಗಬೇಕು. 1500 ಕೋಟಿ ಆಸ್ಪತ್ರೆಗೆ ಕೊಡ್ತಿದ್ದೇವೆ. ಆಯುಷ್ಮಾನ್ ಕಾರ್ಡ್ ಬಳಸುವ ಆಸ್ಪತ್ರೆಗಳಿಗೆ ಕೊಡ್ತಿದ್ದೇವೆ. ಬಿಪಿಎಲ್ ಕಾರ್ಡ್ ದಾರರಿಗೆ ಇದು ಉಪಯೋಗವಾಗಲಿದೆ. ಆಯುಷ್ಮಾನ್ ಕಾರ್ಡ್ ಇರಲೇಬೇಕೆಂದಿಲ್ಲ. ಬಿಪಿಎಲ್ ಕಾರ್ಡ್ ಇದ್ರೂ ಟ್ರೀಟ್ ಮೆಂಟ್ ಸಿಗಲಿದೆ” ಎಂದರು.