ಮಂಡ್ಯ ಜಿಲ್ಲೆಯ ಜನರು ಶಾಂತಿ ಪ್ರಿಯರು ಎಂದಿಗೂ ಧರ್ಮ ಜಾತಿ ವಿಚಾರದಲ್ಲಿ ಕಲಹ ಬಯಸಲ್ಲ. ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡದಿರಿ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮನವಿ ಮಾಡಿದರು.
ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಸ್ವಾತಂತ್ರ್ಯ ನಂತರ
ಈವರಗೆ ಮಂಡ್ಯದ ಯಾವುದೇ ಧರ್ಮಾದಾರಿತ ಸಂಘರ್ಷ ನಡೆದಿಲ್ಲ. ಅದನ್ನು ರಾಜಕೀಯ ಕರಣಗಳಿಗೆ ಅದನ್ನು ಕದಡದಿರಿ” ಎಂದು ಕೋರಿದರು.
“ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ರಾಷ್ಟ್ರ ಧ್ವಜ ನಮ್ಮ ಮೊದಲ ಆಧ್ಯತೆ ಅದಕ್ಕೆ ಗೌರವ ಕೊಡುವ ಕೆಲಸ ಮಾಡಬೇಕು” ಎಂದರು.
“ನಾವು ಭ್ರಷ್ಟಾಚಾರ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಅದರೆ ಒಂದೇ ಸಲಕ್ಕೆ ಎಲ್ಲವನ್ನೂ ನಿರ್ಮೂಲನೆ ಮಾಡುವುದು ಅಸಾಧ್ಯ.ಹಂತ ಹಂತವಾಗಿ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗುತ್ತದೆ” ಎಂದು ತಿಳಿಸಿದರು.
ಲೋಕಾಯುಕ್ತ ಬಲ ಪಡಿಸುವ ಕೆಲಸ ಮಾಡುತ್ತೇವೆ
“ಲೋಕಾಯುಕ್ತ ಶಿಫಾರಸು ಮಾಡಿದ ಎಲ್ಲಾ ಪ್ರಕರಣಗಳಲ್ಲಿ ಸರ್ಕಾರ ಮರು ಚಿಂತನೆ ಮಾಡದೆ ಕ್ರಮವಹಿಸುತ್ತಿದೆ” ಎಂದರು.
“ಕೇಂದ್ರ ಸರ್ಕಾರ ಕೆಟ್ಟ ನೀತಿ ಅನುಸರಿಸುತ್ತಿದೆ. ಜನರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಗೆ ತಕ್ಕ ಉತ್ತರ ನೀಡಿದರೆ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುವುದು ತಪ್ಪಲಿದೆ”
ಎನ್.ಚಲುವರಾಯಸ್ವಾಮಿ ಹೇಳಿದರು.
“ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯ ಮಂತ್ರಿಯಾದಾಗ ಕೇಂದ್ರಕ್ಕೆ ನಾವೇನು ಭಿಕ್ಷೆ ಬೇಡುತ್ತಿಲ್ಲ ಎಂದಿದ್ದರು. ನಾವು ಹಾಗೇ ನಮ್ಮ ಹಕ್ಕು ಕೇಳುತ್ತಿದ್ದೇವೆ ಅದು ತಪ್ಪಾ. ನಮ್ಮ ರಾಜ್ಯದ ಸಂಸದರು ಕೈ ಕಟ್ಟಿ ನಿಂತರೆ ನಾವೇನು ಹೇಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.