Homeಕರ್ನಾಟಕಮೂರು ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಅಮಾನುಷ ಚಿತ್ರಹಿಂಸೆ ನೀಡಿದ ರಾಕ್ಷಸಿ ತಾಯಿ!

ಮೂರು ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಅಮಾನುಷ ಚಿತ್ರಹಿಂಸೆ ನೀಡಿದ ರಾಕ್ಷಸಿ ತಾಯಿ!

ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಅಮಾನುಷ ಚಿತ್ರಹಿಂಸೆ ನೀಡಿದ ರಾಕ್ಷಸಿ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಮಗುವಿಗೆ ಮೈಕೈ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ ಪಾಪಿ ಶಾರಿನ್‌ ಹಾಗೂ ಆಕೆಯ ಗೆಳೆಯ ದಿನೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಮೂರುವರೆ ವರ್ಷದ ಮಗು ಸ್ಟಾಲಿನ್‌ನನ್ನು ಮನೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದ ಶಾರಿನ್‌ ತನ್ನ ಗೆಳೆಯನ ಜತೆ ಸೇರಿ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿರುವುದು ಕಳೆದ ಫೆ.19ರಂದು ಮಹಿಳಾ ಸಂಘಟನೆಯವರ ಸಕಾಲಿಕ ಮಧ್ಯಪ್ರವೇಶದಿಂದ ಬೆಳಕಿಗೆ ಬಂದಿತ್ತು.

ರಾಜೇಶ್ವರಿ ಮತ್ತು ಇತರ ಸಹೃದಯಿ ಮಹಿಳೆಯರು ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಮಗುವೊಂದು ದಿಗ್ಬಂಧನದಲ್ಲಿದೆ ಎಂಬ ಸುದ್ದಿ ತಿಳಿದು ಭೇಟಿ ನೀಡಿದಾಗ ಕರುಣಾಜನಕ ಕಥೆ ಬೆಳಕಿಗೆ ಬಂದಿತ್ತು.

ಹಲ್ಲೆಗೀಡಾದ ಮೂರುವರೆ ವರ್ಷದ ಸ್ಟಾಲಿನ್ ಎಂಬ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಿಸಿ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ.

ಬನಶಂಕರಿ 3ನೇಹಂತದ ಹೊಸಕೆರೆಹಳ್ಳಿಯ ವೀರಭದ್ರನಗರದ ಆರೋಪಿ ತಾಯಿ ಶಾರಿನ್ ಚರ್ಚ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಮೂರುವರೆ ವರ್ಷದ ಮಗು ಸ್ಟಾಲಿನ್ ನೊಂದಿಗೆ ಇದ್ದಳು. ಮನೆಗೆ ಪ್ರಿಯಕರ ದಿನೇಶ್ ಪ್ರತಿನಿತ್ಯ ಬಂದು ಹೋಗುತ್ತಿದ್ದು, ಅವನೊಂದಿಗೆ ಶಾರಿನ್ ಅನೈತಿಕ ಸಂಬಂಧ ಹೊಂದಿದ್ದಳು.

ಮಗು ಸ್ಟಾಲಿನ್ ಗೆ ತಾಯಿ ಶಾರಿನ್, ಪ್ರಿಯಕರನೊಂದಿಗೆ ಸೇರಿಕೊಂಡು ಮನಬಂದಂತೆ ದಿನನಿತ್ಯ ಹಲ್ಲೆ ನಡೆಸುತ್ತಿದ್ದಳು. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋಗುತ್ತಿದ್ದಳು. ಈ ವಿಷಯ ತಿಳಿದು ನೆರೆಹೊರೆಯ ದೂರಿನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಗು ಸ್ಟಾಲಿನ್ ನನ್ನು ರಕ್ಷಿಸಿದ್ದರು.

ಆಗ ಮಹಿಳಾ ಸಂಘಟನೆಯವರು‌ ನೀಡಿದ ಮಾಹಿತಿಯಂತೆ ಪೊಲೀಸರು ಮಧ್ಯಪ್ರವೇಶಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾರಿನ್‌ ಗೆ 2000ರಲ್ಲಿ ಮಗು ಜನಿಸಿದ್ದು ಅಷ್ಟರ ವೇಳೆಗೆ ದಂಪತಿಯ ಸಂಬಂಧ ಹಳಸಿತ್ತು. ಒಂದು ಹಂತದವರೆಗೆ ತವರು ಮನೆಯವರ ಬೆಂಬಲ ಪಡೆದಿದ್ದ ಶಾರಿನ್‌ ಬಳಿಕ ಏಕಾಂಗಿಯಾಗಿದ್ದಳು. ಆಗ ಆಕೆಯ ಸನಿಹಕ್ಕೆ ದಿನೇಶ್‌ ಬಂದಿದ್ದ.

ಶಾರಿನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆತ ವೀರಭದ್ರ ನಗರದ ಮನೆಗೆ ಆಗಾಗ ಬರುತ್ತಿದ್ದು, ಶಾರಿನ್‌ ಜತೆ ಸೇರಿ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅವರಿಬ್ಬರು ಮಗುವಿಗೆ ಯಾಕೆ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ದಿನೇಶ್‌ ಕೂಡಾ ಒಬ್ಬ ವಿಕೃತ ವ್ಯಕ್ತಿ ಎನ್ನುವುದು ಆತ ಮಗುವಿಗೆ ನೀಡಿದ ಚಿತ್ರಹಿಂಸೆಯಿಂದ ಸ್ಪಷ್ಟವಾಗಿದೆ.

ಚೈಲ್ಡ್ ವೆಲ್ ಫೇರ್ ಕಮಿಟಿ ಅಧಿಕಾರಿ ನಾಗರತ್ನ ನೀಡಿದ ದೂರಿನ ಮೇಲೆ ಜುವೆನಿಲ್ ಜಸ್ಟಿಸ್ ಆ್ಯಕ್ಟ್ , ಐಪಿಸಿ ಸೆಕ್ಷನ್ 32,323,324,342 ಅಡಿ ಬಂಧಿತರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments