ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಮಂಗಳವಾರ (ನ.22) ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರವಾಗಿ ಸಭೆ ನಡೆದಿದ್ದು, ಅಯ್ಕೆ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ
ತಡರಾತ್ರಿವರೆಗೂ ನಡೆದ ಸಭೆ ಅಪೂರ್ಣಗೊಂಡಿದೆ. ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ತಮ್ಮ ಪರವಾಗಿರುವ ನಾಯಕರಿಗೆ ಸ್ಥಾನ ಕೊಡಿಸಲು ಪಟ್ಟು ಹಿಡಿದಿದ್ದಾರೆ. ಹೀಗಾಗಿ ರಣದೀಪ ಸುರ್ಜೆವಾಲ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ನವೆಂಬರ್ 28ರಂದು ಮತ್ತೆ ರಾಜ್ಯಕ್ಕೆ ಸುರ್ಜೇವಾಲ ಆಗಮಿಸಲಿದ್ದಾರೆ. ಇನ್ನು ಮಂಗಳವಾರ ನಡೆದ ಸಭೆಯಲ್ಲಿ ಹಲವು ನಾಯಕರ ಹೆಸರು ಪ್ರಸ್ತಾಪವಾಗಿದ್ದು, ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಪಟ್ಟಿ ಸಮೇತ ತೆರಳಿರುವ ಸುರ್ಜೆವಾಲಾ ಎಐಸಿಸಿ ನಾಯಕರೊಂದಿಗೆ ಚರ್ಚಿಸಲಿದ್ದಾರೆ.
ಸಭೆಯ ಬಳಿಕ ಡಿಕೆ ಶಿವಕುಮಾರ್ ಸುದ್ದಿಗಾರರ ಜೊತೆ ಮಾತನಾಡಿ, “ನಾವು ಲೋಕಸಭಾ ಚುನಾವಣೆಗೆ ಹೋಗಬೇಕು. ಹೀಗಾಗಿ ಸೂಕ್ತ ನಾಯಕರಿಗೆ ನಿಗಮ ಮಂಡಳಿ ಸ್ಥಾನ ಸಿಗಬೇಕಿದೆ. ನಮ್ಮ ನಾಯಕರ ನಡುವೆ ಚರ್ಚೆ ನಡೆದಿದ್ದು, ಆದಷ್ಟು ಬೇಗ ನೇಮಕವಾಗಲಿದೆ” ಎಂದು ತಿಳಿಸಿದರು.
ಡಾ. ಜಿ ಪರಮೇಶ್ವರ್ ಮುನಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ನಮ್ಮಲ್ಲಿ ಯಾವುದೇ ನಾಯಕರು ಮುನಿಸಿಕೊಂಡಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ನಾವೆಲ್ಲ ಒಗ್ಗಟ್ಟಾಗಿಯೇ ಇದ್ದೇವೆ” ಎಂದು ಹೇಳಿದರು.
ಸರ್ಕಾರದ ಅಧೀನದಲ್ಲಿ ಒಟ್ಟಾರೆ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಸರದಿ ಬಂದಾಗ ನೇಮಕಗಳನ್ನು ಮಾಡುತ್ತವೆ.
ಸಂಭಾವ್ಯರ ಪಟ್ಟಿ ಹೀಗಿದೆ
ಶಿವಲಿಂಗೇಗೌಡ
ಬಿ.ಕೆ ಸಂಗಮೇಶ್
ಬಂಗಾರಪೇಟೆ ನಾರಾಯಣಸ್ವಾಮಿ
ಕೆ.ವೈ ನಂಜೇಗೌಡ
ಬಿ.ಆರ್ ಪಾಟೀಲ್
ಪಿ.ಎಂ ನರೇಂದ್ರ ಸ್ವಾಮಿ
ರಮೇಶ್ ಬಾಬು ಬಂಡಿಸಿದ್ದೇಗೌಡ
ಅನಿಲ್ ಚಿಕ್ಕಮಾದು
ಟಿ.ಡಿ ರಾಜೇಗೌಡ
ರಘುಮೂರ್ತಿ
ಭೀಮಣ್ಣ ನಾಯ್ಕ್
ಸತೀಶ್ ಸೈಲ್
ಪ್ರಸಾದ್ ಅಬ್ಬಯ್ಯ
ಜಿ.ಟಿ ಪಾಟೀಲ್
ಡಿ.ಆರ್ ಪಾಟೀಲ್
ಗಣೇಶ್ ಹುಕ್ಕೇರಿ
ಮಹಾಂತೇಶ್ ಕೌಜಲಗಿ
ಯಶವಂತ್ ರಾಯ್ ಗೌಡ ಪಾಟೀಲ್
ಬಿ.ಜಿ ಗೋವಿಂದಪ್ಪ
ರಾಘವೇಂದ್ರ ಹಿಟ್ನಾಳ್
ಬಸನಗೌಡ ತುರುವಿಹಾಳ್