14 ತಿಂಗಳ ಬಳಿಕ ಮುರುಘಾ ಶ್ರೀ ಚಿತ್ರದುರ್ಗ ಜೈಲಿನಿಂದ ಜಾಮೀನು ಮೇಲೆ ಗುರುವಾರ ಬಿಡುಗಡೆಯಾಗಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಜಾಮೀನು ಸಿಕ್ಕ ಹಿನ್ನಲೆ ಜೈಲಿನಿಂದ ಹೊರಬಂದಿದ್ದಾರೆ. ಆದರೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡದಂತೆ ಸೇರಿ ಹಲವು ಷರತ್ತುಗಳ ಹೈಕೋರ್ಟ್ ಜಾಮೀನು ನೀಡಿದೆ.
ಜೈಲಿನಿಂದ ಹೊರಬಂದ ಮುರುಘಾ ಶ್ರೀ ನೇರವಾಗಿ ದಾವಣಗೆರೆಗೆ ತೆರಳಿದ್ದಾರೆ. ಪ್ರಕರಣದ ಸಾಕ್ಷ್ಯಾಧಾರ ನಾಶ ಮಾಡುವಂತಿಲ್ಲ. ಇಂತಹ ಕೃತ್ಯ ಪುನರಾವರ್ತನೆ ಮಾಡುವಂತಿಲ್ಲ. ಇಬ್ಬರು ಶೂರಿಟಿ ನೀಡಬೇಕು. ಪಾಸ್‌ಪೋರ್ಟ್ ಕೋರ್ಟ್‌ಗೆ ಸಲ್ಲಿಸಬೇಕು. ಕೋರ್ಟ್‌ಗೆ ವಿಸಿ ಮೂಲಕ ಹಾಜರಾಗಬೇಕು. ಚಿತ್ರದುರ್ಗಕ್ಕೆ ಪ್ರವೇಶವಿಲ್ಲ ಎಂಬ ಷರತ್ತು ಆರೋಪಿ ಮುರುಘಾಶ್ರೀಗೆ ಹಾಕಲಾಗಿದೆ.
ಸೆಪ್ಟೆಂಬರ್ 1, 2022 ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ನಿರೀಕ್ಷಣಾ ಜಾಮೀನನ್ನು ಕೂಡಾ ಕೋರ್ಟ್ ತಿರಸ್ಕರಿಸಿತ್ತು. ಇಬ್ಬರು ಶೂರಿಟಿ ನೀಡುವಂತೆ ಹೈಕೋರ್ಟ್ ಆದೇಶದ ಪ್ರಕಾರ, ಷರತ್ತುಗಳನ್ನು ಪೂರೈಸಿದ ಕಾರಣ, ಜೈಲಿನಿಂದ ಬಿಡುಗಡೆ ಮಾಡಲಾಗಿದೆ.