Homeಕರ್ನಾಟಕಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಿರಿಯ ಚಿಂತಕ, ಬರಹಗಾರ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯು ತನ್ನ ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು 24 ಭಾಷೆಗಳಲ್ಲಿ ಬುಧವಾರ (ಡಿ.20) ಪ್ರಕಟಿಸಿದೆ. ಇದರಲ್ಲಿ 9 ಕವನಗಳು, 6 ಕಾದಂಬರಿಗಳು, 5 ಸಣ್ಣ ಕಥೆಗಳು, 3 ಪ್ರಬಂಧಗಳು ಮತ್ತು 1 ಸಾಹಿತ್ಯ ಅಧ್ಯಯನ 2023ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಆಗಿವೆ.

ಲಕ್ಷ್ಮೀಶ ತೋಳ್ಪಾಡಿ ಅವರ ‘ಮಹಾಭಾರತ ಅನುಸಂಧಾನದ ಭಾರತಯಾತ್ರೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮಾಧವ್ ಕೌಶಿಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 24 ಭಾರತೀಯ ಭಾಷೆಗಳಲ್ಲಿ ಪ್ರತಿಷ್ಠಿತ ತೀರ್ಪುಗಾರರ ಸದಸ್ಯರು ಶಿಫಾರಸು ಮಾಡಿದ ಪ್ರಶಸ್ತಿಗಳನ್ನು ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯು ಅನುಮೋದಿಸಿತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ನಾಗೇಶ ಹೆಗಡೆ, ಆನಂದ ಝುಂಜರವಾಡ, ಜ ನಾ ತೇಜಶ್ರೀ ಅವರು ಇದ್ದರು.

ಲಕ್ಷ್ಮೀಶ ತೋಳ್ಪಾಡಿ ಕಿರು ಪರಿಚಯ

ಲಕ್ಷ್ಮೀಶ ತೋಳ್ಪಾಡಿ ಅವರು ಲೇಖಕ, ಚಿಂತಕ ಮತ್ತು ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ಇವರ ಆಡುಭಾಷೆ ತುಳು. ಇವರು ತಾರುಣ್ಯದಲ್ಲಿ ಕೆಲ ಕಾಲ ಬೆಂಗಳೂರಿನಲ್ಲಿದ್ದರು. ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ ಪತ್ರಿಕೆ, ಕಿ ರಂ ನಾಗರಾಜ ಅವರ ಒಡನಾಟ ಇವರಿಗೆ ಲಭಿಸಿತ್ತು.

ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಭಗವದ್ಗೀತೆಯ ಬಗೆಗಿನ ‘ಮಹಾಯುದ್ದಕ್ಕೆ ಮುನ್ನ’ ಮೊದಲ ಪ್ರಕಟಿತ ಕೃತಿ. ಈ ಕೃತಿಯ ಬಗ್ಗೆ ಬಂದಿರುವ ಪತ್ರಿಕಾ ವಿಮರ್ಶೆಯಲ್ಲಿ ‘ಆಧುನಿಕನಿಗೆ ಹೃದಯಸ್ಪರ್ಶಿ’ ಎಂಬ ಮೆಚ್ಚುಗೆ ವ್ಯಕ್ತವಾಗಿತ್ತು. ಅಂತರ್ಜಾಲ ಪತ್ರಿಕೆಯಲ್ಲಿ ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ ‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’, ‘ಭವ ತಲ್ಲಣ’ (ತಾಳಮದ್ದಲೆ ಕುರಿತು) ಕೃತಿಗಳು ಪ್ರಕಟವಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments