Homeಕರ್ನಾಟಕಅನ್ನದಾತರ ನೋವಿಗೆ ಸ್ಪಂದಿಸದೇ ಇದ್ದಲ್ಲಿ ಬಿಜೆಪಿ ಸುಮ್ಮನೆ ಕೂರದು: ಬಿ ವೈ ವಿಜಯೇಂದ್ರ

ಅನ್ನದಾತರ ನೋವಿಗೆ ಸ್ಪಂದಿಸದೇ ಇದ್ದಲ್ಲಿ ಬಿಜೆಪಿ ಸುಮ್ಮನೆ ಕೂರದು: ಬಿ ವೈ ವಿಜಯೇಂದ್ರ

ರೈತರ ಖಾತೆಗೆ ಬಂದ ಬರ ಪರಿಹಾರದ ಹಣವನ್ನೂ ಬ್ಯಾಂಕ್‌ಗಳು ಸಾಲ ಅಥವಾ ಮುಂಗಡ ಹಣಕ್ಕಾಗಿ ಕಡಿತಗೊಳಿಸುತ್ತಿರುವುದು ಅಮಾನವೀಯ ಕ್ರಮ. ಕುಂಭಕರ್ಣ ನಿದ್ದೆಯಲ್ಲಿರುವ ರಾಜ್ಯ ಸರ್ಕಾರ ತಕ್ಷಣ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ನಿರ್ದೇಶನ ನೀಡಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಎಕ್ಸ್‌ ತಾಣದಲ್ಲಿ ಈ ಕುರಿತು ಶುಕ್ರವರಾ (ಮೇ17) ಪೋಸ್ಟ್‌ ಮಾಡಿರುವ ಅವರು, ” ನಾಡಿನ ಅನ್ನದಾತರು, ಬಡವರ ನೋವಿಗೆ ತಕ್ಷಣ ಸ್ಪಂದಿಸದೇ ಇದ್ದಲ್ಲಿ ರೈತಪರ ಕಾಳಜಿಗಾಗಿ ಸದಾ ಸ್ಪಂದಿಸುವ ಬಿಜೆಪಿ ಸುಮ್ಮನೆ ಕೂರದು” ಎಂದು ಎಚ್ಚರಿಸಿದ್ದಾರೆ.

“ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರು ಈಚೆಗಷ್ಟೇ ಮಳೆರಾಯನ ಆಗಮನದಿಂದ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ ರೈತರ ಖಾತೆಗೆ ಬಂದ ಬರ ಪರಿಹಾರದ ಹಣವನ್ನೂ ಬ್ಯಾಂಕ್ ಗಳು ಸಾಲ ಅಥವಾ ಮುಂಗಡ ಹಣಕ್ಕಾಗಿ ಕಡಿತಗೊಳಿಸುತ್ತಿರುವುದು ಅಮಾನವೀಯ ಕ್ರಮವಾಗಿದೆ. ಮತ್ತೊಂದೆಡೆ ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿಗಾಗಿ ಕಿರುಕುಳ ನೀಡುತ್ತಿರುವ ಘಟನೆಗಳು ವರದಿಯಾಗುತ್ತಿವೆ” ಎಂದು ಹೇಳಿದ್ದಾರೆ.

https://x.com/BYVijayendra/status/1791315546237243585

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments