ಇಂದಿನ (ಜ.10) ಚುನಾವಣೆಯಲ್ಲಿ ಕಾಂಗ್ರೆಸ್‌ನ ಒಗ್ಗಟ್ಟು ಪ್ರದರ್ಶನ ಆಗಿದೆ. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಮೇಯರ್ ಆಯ್ಕೆ ನಡೆದಿದೆ ಎಂದು ಸಚಿವ ನಾಗೇಂದ್ರ ಹೇಳಿದರು.
ಬಳ್ಳಾರಿ ಪಾಲಿಕೆ ಮೇಯರ್ ಎಲೆಕ್ಷನ್ ಬಳಿಕ ಸಚಿವ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “29 ಕ್ಕೆ 29 ಮತ ಪಡೆಯುವ ಮೂಲಕ 31 ನೇ ವಾರ್ಡ್ ಕೈ ಸದಸ್ಯೆ ಶ್ವೇತಾ ಬಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ವೇತಾ ಗೆಲವುವಾಗಿದೆ” ಎಂದರು.
“ಪೂರ್ಣ ಮತದಿಂದ ಶ್ವೇತಾ ಆಯ್ಕೆಯಾಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣಾ ಎದುರಿಸಿದ್ದೇವೆ. ನನ್ನ ಹಾಗೂ ಶಾಸಕ ಭರತ್ ರೆಡ್ಡಿ ನಡುವೆ ಯಾವದೆ ಒಡಕು ಇಲ್ಲ. ಭರತ್ ರೆಡ್ಡಿ ನನ್ನ ಸಹೋದರ, ನಮ್ಮಲ್ಲಿ ಯಾವ್ದೆ ಒಡಕಿಲ್ಲ” ಎಂದು ಹೇಳಿದರು.
“ಪಕ್ಷೇತರ ಅಭ್ಯರ್ಥಿಗಳು ಕೂಡ ಕಾಂಗ್ರೆಸ್‌ನವರು. 05 ಜನ ಪಕ್ಷೇತರರ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಕುಬೇರ, ಮಿಂಚು ಶ್ರೀನಿವಾಸ ಅವರು ಮೇಯರ್ ಆಕಾಂಕ್ಷಿಯಾಗಿದ್ದರು. ಆದರೆ ಶ್ವೇತಾ, ಮೇಯರ್ ಆಗಬೇಕು ಅಂತಾ ಪಕ್ಷದ ಹೈಕಮಾಂಡ್ ತಿರ್ಮಾನ ಆಗಿದೆ” ಎಂದು ತಿಳಿಸಿದರು.
“ನಾನು ಹಾಗೂ ಸಹೋದರ ನಾರಾ ಭರತ್ ರೆಡ್ಡಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೇವೆ. ನನ್ನ ಹಾಗೂ ಭರತ್ ರೆಡ್ಡಿ ನಡುವೆ ಯಾವ್ದೆ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಸಿದ್ದಾಂತದ ಮೇಲೆ ನಮ್ಮ ನಿಲುವಿದೆ. ನಮ್ಮಲ್ಲಿ ಒಡಕಾಗುತ್ತೇ ಅಂತಾ ಬಿಜೆಪಿಯವರು ಕಾಯುತ್ತಿದ್ದರು. ಕಾಂಗ್ರೆಸ್ ಒಗ್ಗಟ್ಟಿನ ಮುಂದೆ ಬಿಜೆಪಿ ಗೇಮ ನಡೆಯಲಿಲ್ಲ” ಎಂದು ನಾಗೇಂದ್ರ ಹೇಳಿದರು.