Homeಕರ್ನಾಟಕಬೆಂಗಳೂರು | ಚಿಂದಿ ಆಯುವ ವ್ಯಕ್ತಿಗೆ ಸಿಕ್ಕಿತು ಮೂರು ಮಿಲಿಯನ್ ಡಾಲರ್!

ಬೆಂಗಳೂರು | ಚಿಂದಿ ಆಯುವ ವ್ಯಕ್ತಿಗೆ ಸಿಕ್ಕಿತು ಮೂರು ಮಿಲಿಯನ್ ಡಾಲರ್!

ರಾಜಧಾನಿಯಲ್ಲಿ ಚಿಂದಿ ಆಯುವ ವ್ಯಕ್ತಿಗೆ ಸುಮಾರು 30 ಲಕ್ಷ ರೂ. ಮೌಲ್ಯದ ಮೂರು ಮಿಲಿಯನ್ ಡಾಲರ್ ಹಣ ದೊರೆಕಿದೆ‌. ಆದರೆ, ಇದು ಅಸಲಿಯೋ, ನಕಲಿಯೋ ಎಂದು ತಿಳಿಯದೆ ಪೊಲೀಸರು ಕೂಡಾ ತಲೆ ಕೆಡಿಸಿಕೊಂಡಿದ್ದಾರೆ.

ಮಹಾನಗರ ‌ಬೆಂಗಳೂರಿನಲ್ಲಿ ಚಿಂದಿ ಆಯುವವರ ಕೊಡುಗೆ ಅಪಾರ. ಇಂತಹವರು ಚಿಂದಿ ಆಯುವ ವೇಳೆ ಅನೇಕ ವಸ್ತುಗಳು ದೊರೆತು ಅದರಿಂದ ಕೆಲವರು ಲಾಭ ಪಡೆದರೆ, ಮತ್ತೆ ಕೆಲವರು ಫಜೀತಿಗೆ ಸಿಲುಕಿದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಘಟನೆಗಳ ಸರಮಾಲೆಗೆ ಈ ಘಟನೆ ಸೇರ್ಪಡೆಯಾಗಿದೆ.

ಕಳೆದ ನ.1ರಂದು ನಾಗವಾರ ರೈಲು ನಿಲ್ದಾಣದ ಬಳಿ ಸೇಲ್ಮನ್ ಎಸ್‌ಕೆ (39) ಎಂಬ ವ್ಯಕ್ತಿ ಚಿಂದಿ ಆಯುತ್ತಿದ್ದಾಗ ಸುಮಾರು ಮೂರು ಮಿಲಿಯನ್ ಡಾಲರ್ ಹಣವಿದ್ದ ಪ್ಲಾಸ್ಟಿಕ್ ಬ್ಯಾಗ್ ದೊರಕಿದೆ. ಈ ಬ್ಯಾಗ್‌ನಲ್ಲಿ‌ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರವೂ ಸಿಕ್ಕಿದೆ. ಇವೆಲ್ಲಾ ನಗರ‌ ಪೊಲೀಸರ ನಿದ್ದೆಗೆಡಿಸಿವೆ.

ಪಶ್ಚಿಮ ಬಂಗಾಳದ ನಾಡಿಯಾ ಮೂಲದ ಸೇಲ್ಮನ್ ಎಸ್‌ಕೆ ನಗರದಲ್ಲಿ ಚಿಂದಿ ಆಯುತ್ತಿದ್ದು, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರು ನವೆಂಬರ್ 1ರಂದು  ನಾಗವಾರ ರೈಲು ನಿಲ್ದಾಣದ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಹುಡುಕುತ್ತಿದ್ದಾಗ ಅಲ್ಲಿನ ರೈಲ್ವೆ ಹಳಿ ಮೇಲೆ ಕಪ್ಪು ಚೀಲ ಪತ್ತೆಯಾಗಿದೆ. ಅದನ್ನು ತೆಗೆದುಕೊಂಡು ಅವರು ಅಮೃತಹಳ್ಳಿಯ ತಮ್ಮ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಸೇಲ್ಮನ್ ಪ್ಲಾಸ್ಟಿಕ್ ಚೀಲವನ್ನು ತೆರೆದಾಗ ಅದರಲ್ಲಿ ಡಾಲರ್ ಕಂಡುಬಂದಿವೆ.

ಈ ಡಾಲರ್ ಗಳನ್ನು ಏನು ಮಾಡಬೇಕೆಂದು ತಿಳಿಯದೆ, ಸೇಲ್ಮನ್ ಗುಜರಿ ವ್ಯಾಪಾರಿ ಬಪ್ಪ ಎಂಬಾತನಿಗೆ ಕರೆ ಮಾಡಿದ್ದಾರೆ. ಈ‌ ವೇಳೆ ಆತ ನಾನು ಯಾವುದೋ ಊರಿಗೆ ಹೋಗಿದ್ದೇನೆ. ಬೇಗ ವಾಪಸ್ ಬರುತ್ತೇನೆ, ಅಲ್ಲಿಯವರೆಗೆ ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಸೇಲ್ಮನ್ ಗೆ ಹೇಳಿದ್ದಾರೆ.

ಆದರೆ ಬ್ಯಾಗ್ ಬಳಿಕ ತನ್ನ ಮನೆಯಲ್ಲಿ ಹಣವನ್ನು ಇಡಲು ಕಷ್ಟವಾದ ಸೇಲ್ಮಾನ್  ಎರಡು ದಿನಗಳ ಬಳಿ ಈ ವಿಷಯವನ್ನು ಸ್ವರಾಜ್ ಇಂಡಿಯಾದ ಸಾಮಾಜಿಕ ಕಾರ್ಯಕರ್ತ ಆರ್ ಕಲೀಂ ಉಲ್ಲಾ ಅವರಿಗೆ ತಿಳಿಸಿದ್ದಾರೆ. ಕಲೀಂ ಉಲ್ಲಾ ಎಲ್ಲ ವಿದ್ಯಮಾನವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ನೀಡಿದ್ದಾರೆ.

ಹಣದ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದಾಗ ಹಣದ ಜತೆಗೆ ಸೇಲ್ಮನ್‌ನನ್ನು ಕಚೇರಿಗೆ ಕರೆತರುವಂತೆ ದಯಾನಂದ ಅವರು ಹೇಳಿದ್ದು  ಅಧಿಕಾರಿರಗಳ ಬಳಿ ಸೇಲ್ಮನ್  ರೈಲ್ವೆ ಹಳಿ ಮೇಲೆ ಹಣ ಸಿಕ್ಕಿರುವುದನ್ನು ಬಹಿರಂಗಪಡಿಸಿದ್ದಾರೆ. ಕಮಿಷನರ್ ಕೂಡಲೇ ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಘಟನಾ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು ಎಂದು ಉಲ್ಲಾ ಸುದ್ದಿಗಾರರಿಗೆ ಹೇಳಿದ್ದಾರೆ.

ಈ ಡಾಲರ್ ಗಳು ನಕಲಿ ಎಂದು ತೋರುತ್ತಿದ್ದು, ಅವುಗಳನ್ನು ಸಂಪೂರ್ಣ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments