Homeಕರ್ನಾಟಕಅನಂತಕುಮಾರ್‌ಗೆ ಹುಚ್ಚು ಹಿಡಿದಿದೆ, ಚಿಕಿತ್ಸೆ ಕೊಡಿಸಿ: ಶಿವರಾಜ್ ತಂಗಡಗಿ ವಾಗ್ದಾಳಿ

ಅನಂತಕುಮಾರ್‌ಗೆ ಹುಚ್ಚು ಹಿಡಿದಿದೆ, ಚಿಕಿತ್ಸೆ ಕೊಡಿಸಿ: ಶಿವರಾಜ್ ತಂಗಡಗಿ ವಾಗ್ದಾಳಿ

ಹುಚ್ಚನಂತೆ ಆಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆಗೆ ಅವರ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಚಿಕಿತ್ಸೆ ಕೊಡಿಸಲಿ, ಆಗಲ್ಲ ಅಂದ್ರೆ ನಾವು ಕೊಡಿಡುತ್ತೇವೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹರಿಹಾಯ್ದರು.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, “ಅನಂತಕುಮಾರ್‌ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಆತ ಬಿಜೆಪಿಯೊಳಗಿರುವ ಹುಚ್ಚ, ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಕೆಲಸ ಮೊದಲು ಮಾಡಿ” ಎಂದು ವಾಗ್ದಾಳಿ ನಡೆಸಿದರು.

ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ಎಂಬುದನ್ನು ಬಿಜೆಪಿಯವರೇ ಅರ್ಥಮಾಡಿಕೊಂಡಂತಿದೆ. ಬಿಜೆಪಿ ರಾಜ್ಯಾಧ್ಯಕ್ಷರೇ ಅವರ ಮಾತಿಗೆ ನಾವು ಬೆಲೆ ಕೊಡಲ್ಲ ಅಂದ್ರೆ ಅದರ ಅರ್ಥ, ಅವನು ಹುಚ್ಚ” ಎಂದು ಕಿಡಿಕಾರಿದರು.

ಕಾಂತರಾಜು ವರದಿ ಬಗ್ಗೆ ಪ್ರತಿಕ್ರಿಯಿಸಿ, “ಕಾಂತರಾಜು ರಿಪೋರ್ಟ್ ಸ್ವೀಕಾರ ಮಾಡಲು ಸರ್ಕಾರ ಸಿದ್ಧವಿದೆ.‌ ಜನವರಿ 31ರ ಒಳಗೆ ಕಾಂತರಾಜು ರಿಪೋರ್ಟ್ ತೆಗೆದುಕೊಳ್ಳುತ್ತೇವೆ. ರಿಪೋರ್ಟ್ ಕೊಡಲು ಸೂಚಿಸಿದ್ದೇವೆ. ಆಯೋಗದ ಅವಧಿ ಜನವರಿ 31ವರೆಗೂ ಇದೆ. ಅದರ ಒಳಗೆ ವರದಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ” ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments