ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ನಿವಾಸಿ ಮೊಹಮ್ಮದ್ ಶಫಿ ನಾಶಿಪುಡಿ, ಆರ್.ಟಿ.ನಗರದ ನಿವಾಸಿ ಮುನಾವರ್, ದೆಹಲಿ ಮೂಲದ ಇಲ್ತಾಜ್ ಬಂಧಿತರು ಎಂದು ವಿಧಾನಸೌಧ ಪೊಲೀಸರು ಮಾಹಿತಿ ನೀಡಿದ್ದಾರೆ.
ಇಲ್ತಾಝ್, ಮುನವ್ವರ್, ಮೊಹಮ್ಮದ್ ನಾಶಿಪುಡಿ ಬಂಧಿತರು ಎಂದು ಮಾಹಿತಿ ನೀಡಿರುವ ವಿಧಾನಸೌಧ ಠಾಣೆಯ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಎಫ್ಎಸ್ಎಲ್ ವರದಿ, ಸಾಂಧರ್ಬಿಕ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆ ಮತ್ತು ಲಭ್ಯ ಸಾಕ್ಷಾಧಾರಗಳ ಮೇರೆಗೆ ಮೂರು ಜನ ಆರೋಪಿಗಳನ್ನು ಬಂಧಿಸಿ, ಅವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿರುತ್ತದೆ ಎಂದು ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.