Homeಕರ್ನಾಟಕಪತ್ನಿಗೆ ಮೆಸೇಜ್ ಮಾಡಿದ ಆರೋಪ | ಮುಸ್ಲಿಂ ಯುವಕನನ್ನು ಬರ್ಬರವಾಗಿ ಕೊಲೆಮಾಡಿದ ಪೂಜಾರಿ

ಪತ್ನಿಗೆ ಮೆಸೇಜ್ ಮಾಡಿದ ಆರೋಪ | ಮುಸ್ಲಿಂ ಯುವಕನನ್ನು ಬರ್ಬರವಾಗಿ ಕೊಲೆಮಾಡಿದ ಪೂಜಾರಿ

ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಪೂಜಾರಿ, ಮುಸ್ಲಿಂ ಯುವಕನ ಕಣ್ಣು ಕಿತ್ತು, ಬರ್ಬರವಾಗಿ ಕೊಲೆ ಮಾಡಿರುವ ಅಮಾನುಷ ಘಟನೆ ರಾಯಚೂರು ಜಿಲ್ಲೆಯ ತುಗ್ಗಲದಿನ್ನಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಖಾದರ್ ಭಾಷಾ (28) ಕೊಲೆಯಾದವರು. ಕೃತ್ಯ ನಡೆಸಿದ ಪೂಜಾರಿ‌ ಮಾರುತಿ ಪೊಲೀಸರಿಗೆ ಶರಣಾಗಿದ್ದಾನೆ. ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಮುಸ್ಲಿಂ ಯುವಕ ಮೆಸೇಜ್ ಮಾಡಿದ್ದಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.

ಕೊಲೆಯಾದ ಯುವಕ ಹಾಗೂ ಆರೋಪಿ ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಮಾರುತಿ ಅರ್ಚಕ ಆಗಿದ್ದನು. ಇವನ ಪತ್ನಿಯ ಮೇಲೆ ಖಾದರ್ ಭಾಷಾ ಕಣ್ಣು ಹಾಕಿದ್ದ ಎನ್ನುವ ಅನುಮಾನ ಮಾರುತಿಗೆ ಇತ್ತು. ಖಾದ‌ರ್ ಭಾಷಾ ಪತ್ನಿಗೆ ಮೇಸೆಜ್ ಮಾಡಿದ್ದಾನೆ ಎಂದು ಕೋಪಗೊಂಡ ಮಾರುತಿ ಖಾದ‌ರ್ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಿದ್ದಾನೆ.

ಮಾರುತಿ ಕೊಲೆಗೈದು ತಾನೇ ಖುದ್ದಾಗಿ ಠಾಣೆಗೆ ಬಂದು ಶರಣಾಗತಿ ಆಗಿದ್ದಾನೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಳಿಗ್ಗೆ 9 ಗಂಟೆಗೆ ಸುಮಾರಿಗೆ ತುಗ್ಗಲದಿನ್ನಿ ಗ್ರಾಮದಲ್ಲಿ ಕೃತ್ಯ ನಡೆದಿದೆ. ಕೊಲೆಯಲ್ಲಿ 6 ರಿಂದ 7 ಜನ ಭಾಗಿಯಾಗಿರುವ ಶಂಕೆ ಇದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಕ್ತಸಿಕ್ತವಾಗಿ ಬಿದ್ದಿದ್ದ ಖಾದರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments